ಜಾಗತಿಕ ಹಸಿವಿನ ಪಟ್ಟಿಯಲ್ಲಿ ಭಾರತಕ್ಕೆ 102ನೆಯ ಸ್ಥಾನ: ಪ್ರಧಾನಿಯನ್ನು ತರಾಟೆಗೆತ್ತಿಕೊಂಡ ಕಪಿಲ್ ಸಿಬಲ್

0
522

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.18: ಜಾಗತಿಕ ಹಸಿವಿನ ಪಟ್ಟಿಯಲ್ಲಿ ಭಾರತವು 102ನೆಯ ಸ್ಥಾನದಲ್ಲಿದೆ ಎಂದು ವರದಿಯನ್ನು ಮುಂದಿಟ್ಟು ಹಿರಿಯ ಕಾಂಗ್ರೆಸ್ ನಾಯಕ ಕಪಿ ಸಿಬಲ್ ಪ್ರಧಾನಿಯನ್ನು ಕಟುವಾಗಿ ಟೀಕಿಸಿದ್ದಾರೆ. ದೇಶದ ಮಕ್ಕಳ ವಿಷಯದಲ್ಲಿ ಹೆಚ್ಚು ಗಮನ ಹರಿಸಬೇಕೆಂದು ಅವರು ಹೇಳಿದರು.

ಈ ವರ್ಷದ ವಿಶ್ವ ಹಸಿವು ಸೂಚಿಯಲ್ಲಿ ಜಿಐಎಚ್ ನೆರೆಯ ನೇಪಾಳ, ಪಾಕಿಸ್ತಾನ, ಬಾಂಗ್ಲಾದೇಶಕ್ಕಿಂತ ಕೆಳಗಿನ ಸ್ಥಾನವನ್ನು ಭಾರತ ಹೊಂದಿದೆ ಎಂದು ವರದಿಯಾಗಿದೆ. ಭಾರತ 117 ದೇಶಗಳ ಪಟ್ಟಿಯಲ್ಲಿ 102 ಸ್ಥಾನದಲ್ಲಿದೆ. ಕಳೆದವರ್ಷ 119 ದೇಶಗಳ ಪಟ್ಟಿಯಲ್ಲಿ 103ನೆ ಸ್ಥಾನದಲ್ಲಿತ್ತು. 2000ದಲ್ಲಿ 113 ದೇಶಗಳಲ್ಲಿ ಭಾರತ 83ನೆ ಸ್ಥಾನದಲ್ಲಿತ್ತು.

ಪೋಷಕಾಹಾರ ಕೊರತೆ, ಕಡಿಮೆ ತೂಕ, ಬೆಳವಣಿಗೆ ಕುಂಟಿತ, ಶಿಶು ಮರಣ ಮಾನದಂಡಗಳ ಆಧಾರದಲ್ಲಿ ಪಟ್ಟಿಯನ್ನು ಪ್ರಕಟಿಸಲಾಗುತ್ತಿದೆ. ಭಾತದ ನಾಲ್ಕು ವಿಭಾಗಗಳಲ್ಲಿಯೂ ಆರು ತಿಂಗಳಿನಿಂದ 23 ತಿಂಗಳವರೆಗಿನ ಮಕ್ಕಳ ಅವಸ್ಥೆ ಶೋಚನೀಯವಾಗಿದೆ ಎಂದು ವರದಿ ತಿಳಿಸಿದೆ.

ನೆರೆಯ ನೇಪಾಳ(73), ಶ್ರೀಲಂಕಾ (66), ಬಾಂಗ್ಲಾದೇಶ(88), ಬರ್ಮ(69), ಪಾಕಿಸ್ತಾನ(94) ಸ್ಥಾನದಲ್ಲಿವೆ. ಇವು ಭಾರತಕ್ಕಿಂತ ಉತ್ತಮ ಸ್ಥಿತಿಯಲ್ಲಿವೆ. ಇದನ್ನು ಎತ್ತಿ ಹಿಡಿದು ಮಾತಾಡಿದ ಸಿಬಲ್‍ ಮಕ್ಕಳ ಭವಿಷ್ಯದತ್ತ ದೇಶ ಗಮನಕೊಡಬೇಕೆಂದು ಆಗ್ರಹಿಸಿದರು. ಆರು ತಿಂಗಳಿನಿಂದ 23 ತಿಂಗಳವರೆಗೆಗಿನ ಶೇ.93ರಷ್ಟು ಮಕ್ಕಳಿಗೆ ಕನಿಷ್ಠ ಪೋಷಕಾಹಾರವೂ ಸಿಗುವುದಿಲ್ಲ ಎಂದು ಕಪಿಲ್ ಸಿಬಲ್ ಹೇಳಿದರು.