ಸನ್ಮಾರ್ಗ ವಾರ್ತೆ
ಅಂಕಾರ,ಅ.18: ಐದು ದಿವಸಗಳ ಬಳಿಕ ಸಿರಿಯದ ಕುರ್ದಿಗಳ ವಿರುದ್ಧ ಯುದ್ಧವನ್ನು ಸಮಾಪ್ತಗೊಳಿಸಲು ಅಂಕಾರ ಮತ್ತು ವಾಷಿಂಗ್ಟನ್ ನಡುವೆ ಸಹಮತ ವ್ಯಕ್ತವಾಗಿದೆ ಎಂದು ಅಮೆರಿಕ ಉಪಾಧ್ಯಕ್ಷ ಮೈಕ್ ಪೆನ್ಸ್ ಹೇಳಿದರು. ಟರ್ಕಿ ಅಧ್ಯಕ್ಷ ರಜಬ್ ತಯ್ಯಿಬ್ ಉರ್ದುಗಾನ್ ಅಮೆರಿಕ ಉಪಾಧ್ಯಕ್ಷ ಮೈಕ್ ಪೆನ್ಸ್ ಟರ್ಕಿಯ ರಾಜಧಾನಿ ಅಂಕಾರದ ಅಧ್ಯಕ್ಷರ ಅರಮನೆಯಲ್ಲಿ ನಡೆಸಿದ ಚರ್ಚೆಯಲ್ಲಿ ಇಬ್ಬರೂ ನಾಯಕರು ಸಹಮತಕ್ಕೆ ಬಂದಿದ್ದಾರೆ.
ಟರ್ಕಿ ಅಧ್ಯಕ್ಷರು ಯುದ್ಧ ನಿಲ್ಲಿಸಲು ಒಪ್ಪಿಕೊಂಡಿದ್ದಾರೆಂದು ಪೆನ್ಸ್ ತಿಳಿಸಿದರು. ಆಪರೇಷನ್ ಪೀಸ್ ಸ್ಪ್ರಿಂಗ್ ಎಂಬ ಹೆಸರಿನಲ್ಲಿ ಕುರ್ದ್ ಹೋರಾಟಗಾರರ ವಿರುದ್ಧ ಟರ್ಕಿ ಸೈನಿಕ ಕಾರ್ಯಾಚರಣೆಗಿಳಿದಿತ್ತು. ಕುರ್ದಿಗಳನ್ನು ಭಯೋತ್ಪಾದಕರು ಎಂದು ಟರ್ಕಿ ಹೇಳುತ್ತಾ ಬಂದಿದೆ. ಈಗ ಅಮೆರಿಕದೊಂದಿಗೆ ಟರ್ಕಿ ಮಾಡಿಕೊಂಡ ಒಪ್ಪಂದವನ್ನು ಜಾರಿಗೊಳಿಸಿದರೆ ಟರ್ಕಿಯ ಮೇಲಿನ ಆರ್ಥಿಕ ದಿಗ್ಬಂಧವನ್ನು ಹಿಂಪಡೆಯುವುದಾಗಿ ಪೆನ್ಸ್ ಘೋಷಿಸಿದರು.












