ಐಎನ್‍ಎಕ್ಸ್ ಪ್ರಕರಣ: ಆರೋಪ ಪಟ್ಟಿ ಸಲ್ಲಿಸಿದ ಸಿಬಿಐ

0
450

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.18: ಐಎನ್‍ಎಕ್ಸ್ ಮೀಡಿಯ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ ಆರೋಪ ಪಟ್ಟಿ ಸಲ್ಲಿಸಿದ್ದು ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ, ಅಲ್ಲದೆ ಹನ್ನೆರಡು ಆರೋಪಿಗಳು ಇದ್ದಾರೆ. ಚಿದಂಬರಂ ಪುತ್ರ ಕಾರ್ತಿ ಚಿದಂಬರಂ, ಪೀಟರ್ ಮುಖರ್ಜಿ ಸಿಬಿಐ ಸಲ್ಲಿಸಿದ ಆರೋಪ ಪಟ್ಟಿಯ ಆರೋಪಿಗಳಲ್ಲಿ ಪ್ರಮುಖರು.

ಇವರಲ್ಲದೆ ವಿತ್ತ ಸಚಿವಾಲದಯ ಇತರ ಕೆಲವು ಅಧಿಕಾರಿಗಳು ಆರೋಪಿ ಪಟ್ಟಿಯಲ್ಲಿದ್ದಾರೆ. ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಪಿ.ಚಿದಂಬರಂರ ನ್ಯಾಯಾಂಗ ಕಸ್ಟಡಿ ಕಾಲಾವಧಿ ಅಕ್ಬೋಬರ್ 24ರವರೆಗೆ ಮುಂದುವರಿಸಲಾಗಿದೆ.

ಎನ್‍ಫೋರ್ಸ್‍ಮೆಂಟ್ ಡೈರಕ್ಟರೇಟ್ ದಾಖಲಿಸಿದ ಪ್ರಕರಣಕ್ಕಾಗಿ ಕಸ್ಟಡಿ ಮುಂದುವರಿಸಲಾಯಿತು. ಈಗ ಕೇಸಿಗೆ ಸಂಬಂಧಿಸಿ ಸಿಬಿಐ ಕಸ್ಟಡಿಯಲ್ಲಿ ಚಿದಂಬರಂ ಇದ್ದಾರೆ. ಪೀಟರ್ ಮುಖರ್ಜಿಯ ಮಾಲಕತ್ವದ ಐಎನ್‍ಎಕ್ಸ್ ಮೀಡಿಯಾಕ್ಕೆ ವಿದೇಶಿ ಹೂಡಿಕೆ ಸ್ವೀಕರಿಸಲು ಅಕ್ರಮ ಸಹಾಯ ಮಾಡಿದ್ದಾರೆ ಎಂದು ಚಿದಂಬರಂ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.