ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಅ.18: ಅರ್ಥಶಾಸ್ತ್ರಕ್ಕೆ ನೊಬೆಲ್ ಪ್ರಶಸ್ತಿ ಗಳಿಸಿದ ಭಾರತ ಸಂಜಾತ ಅಭಿಜಿತ್ ಬ್ಯಾನರ್ಜಿಯನ್ನು ವ್ಯಂಗ್ಯ ಮಾಡಿ ಇನ್ನೋರ್ವ ಬಿಜೆಪಿ ನಾಯಕ ರಂಗಪ್ರವೇಶಿಸಿದ್ದಾರೆ. ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ರಾಹುಲ್ ಸಿನ್ಹಾ ವಿವಾದ ಹೇಳಿಕೆ ನೀಡಿದ್ದಾರೆ. ಎರಡನೆ ಪತ್ನಿ ವಿದೇಶಿಯಾಗಿದ್ದು ನೊಬೆಲ್ಗೆ ಅರ್ಹತೆಯೇ? ಎಂದು ಅವರು ವ್ಯಂಗ್ಯವಾಡಿದ್ದಾರೆ.
ಎರಡನೆ ಪತ್ನಿ ವಿದೇಶಿಯಾಗಿದ್ದವರಿಗೆ ಹೆಚ್ಚು ನೋಬೆಲ್ ಲಭಿಸುತ್ತದೆ.ಎರಡನೆ ಪತ್ನಿ ವಿದೇಶಿಯಾಗುವುದು ನೊಬೆಲ್ ಸಿಗುವ ಪದವಿಯೇ ಎಂದು ರಾಹುಲ್ ಸಿನ್ಹಾ ಹೇಳಿದರು. ಅಭಿಜಿತ್ ಬ್ಯಾನರ್ಜಿ ವಿರುದ್ಧ ಮೊದಲೇ ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿಕೆ ನೀಡಿದ್ದಾರೆ. ಅವರು ಹೇಳಿದ್ದೇ ಸರಿ. ಈ ಜನರು ಅರ್ಥಶಾಸ್ತ್ರಕ್ಕೆ ಎಡ ಆಶಯದ ಬಣ್ಣ ಹಚ್ಚುತ್ತಿದ್ದಾರೆ. ಆದರೆ, ಈ ದೇಶದಲ್ಲಿ ಎಡಪಂಥೀಯ ನೀತಿ ಅನವಶ್ಯಕವಾಗಿದೆ.
2019ರಲ್ಲಿ ಅರ್ಥಶಾಸ್ತ್ರ ನೋಬೆಲ್ ಭಾರತದ ಮೂಲದ ಅಭಿಜಿತ್ ಬ್ಯಾನರ್ಜಿ ಮತ್ತು ಅವರ ಪತ್ನಿ ಎಸ್ತರ್ ಡಫ್ಲೊ, ಮೈಕಲ್ ಕ್ರೇಮರ್ಗೆ ಸಿಕ್ಕಿದೆ. ಎಸ್ತರ್ ಅಭಿಜಿತ್ ಬ್ಯಾನರ್ಜಿಯ ಪತ್ನಿಯಾಗಿದ್ದಾರೆ. ಜಾಗತಿಕ ಮಟ್ಟದಲ್ಲಿ ಬಡತನ ಮುಕ್ತಗೊಳಿಸುವುದಕ್ಕಾಗಿ ಇವರ ಮಾಡಿದ ಕೆಲಸಗಳನ್ನು ಪರಿಗಣಿಸಿ ನೊಬೆಲ್ ನೀಡಲಾಗಿದೆ.












