ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಅ.19: ದಲಿತ ರೋಷದ ಮುಂದೆ ಕೇಂದ್ರ ಸರಕಾರ ಮೊಣಕಾಲೂರಿದೆ. ದಿಲ್ಲಿಯ ತುಗಲಕಾಬಾದಿನ ರವಿದಾಸ ಮಂದಿರವನ್ನು ಪುನರ್ ನಿರ್ಮಿಸಲಾಗುವುದು ಎಂದು ಸುಪ್ರೀಂಕೋರ್ಟಿಗೆ ಕೇಂದ್ರ ಸರಕಾರ ತಿಳಿಸಿದೆ.
ಕೇಂದ್ರ ಸರಕಾರದ ಮನವಿಯಂತೆ ಆರನೇ ಶತಮಾನದ ರವಿದಾಸ್ ಮಂದಿರವನ್ನು ಕೆಡವಲಾಗಿತ್ತು. ಜಸ್ಟಿಸ್ ಅರುಣ್ ಮಿಶ್ರಾ ಅಧ್ಯಕ್ಷತೆಯ ಪೀಠ ಮಂದಿರ ಪುನರ್ ನಿರ್ಮಾಣದ ಕುರಿತ ಅರ್ಜಿಯಲ್ಲಿ 23ಕ್ಕೆ ತೀರ್ಪು ನೀಡಲಿದೆ.
ಮಂದಿರದ ಕೆಡವಿದ್ದಕ್ಕೆ ಆಕ್ರೋಶ, ಪ್ರತಿಭಟನೆ ನಡೆಯುವುದನ್ನು ತಡೆಯಬೇಕೆಂದು ಸುಪ್ರೀಂಕೋರ್ಟಿನಲ್ಲಿ ಹೇಳಿದ್ದ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಹಿಂದಿದ್ದ ಸ್ಥಳದಲ್ಲಿಯೇ ಮಂದಿರ ಪುನರ್ ನಿರ್ಮಿಸಲು 200 ಚದರ ಮೀಟರ್ ಸ್ಥಳವನ್ನು ಬಿಟ್ಟುಕೊಡಲಾಗುವುದು ಎಂದು ಶುಕ್ರವಾರ ತಿಳಿಸಿದರು. ಗುರು ರವಿದಾಸ್ ಭಕ್ತರ ವಿಶ್ವಾಸವನ್ನು ಗೌರವಿಸಿ ಸ್ಥಳವನ್ನು ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಆಗಸ್ಟ್ ಹತ್ತಕ್ಕೆ ಗುರು ರವಿದಾಸ್ ಮಂದಿರ ಕೆಡವಲಾಗಿತ್ತು. ಮಂದಿರದ ನಿರ್ವಾಹಕರಾದ ಗುರು ರವಿದಾಸ್ ಜಯಂತಿ ಸಮರೋಹ್ ಸಮಿತಿಯಿಂದ ಸ್ಥಳವನ್ನು ದಿಲ್ಲಿ ಅಭಿವೃದ್ಧಿ ಪ್ರಾಧಿಕಾರ ವಶಕ್ಕೆ ಪಡೆದಿತ್ತು. ನಂತರ ಮಂದಿರ ಕೆಡವುದರ ವಿರುದ್ಧ ಹದಿನೆಂಟು ಸಂಘಟನೆಗಳು ಹೋರಾಟಕ್ಕಿಳಿದಿದ್ದವು. ಪಂಜಾಬ್, ಹರಿಯಾಣ, ದಿಲ್ಲಿ ಸರಕಾರಗಳಲ್ಲಿ ಕಾನೂನು ವ್ಯವಸ್ಥೆ ಕಪಾಡಲು ಆದೇಶ ನೀಡಬೇಕು ಅಟಾರ್ನಿ ಜನರಲ್ ಆಗ್ರಹಿಸಿದ್ದರು ಮತ್ತು ಕೋರ್ಟು ತೀರ್ಪಿಗೆ ರಾಜಕೀಯ ಬಣ್ಣ ಬಳಿಯಲು ಭೂಮಿಯಲ್ಲಿ ಯಾರಿಗೂ ಸಾಧ್ಯವಿಲ್ಲ ಎಂದು ಜಸ್ಟಿಸ ಅರುಣ್ ಮಿಶ್ರ, ಹೇಳಿದ್ದರು.
ಆದರೆ ರವಿದಾಸ್ ಮಂದಿರ ಪರ ದಲಿತ ಹೋರಾಟ ದಿಲ್ಲಿಯಲ್ಲೇ ಕಂಪನ ಸೃಷ್ಟಿಸಿತ್ತು. ಹೋರಾಟಕ್ಕೆ ಆಂಧ್ರ, ಪಂಜಾಬ್ , ದಿಲ್ಲಿ ಹರಿಯಾಣ ಮುಂತಾದ ರಾಜ್ಯಗಳಿಂದ ರವಿದಾಸ್ ಅನುಯಾಯಿಗಳು ದಿಲ್ಲಿಗೆ ಬಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ತುಗ್ಲಕಾಬಾದಿಗೆ ನಡೆಸಿದ ಜಾಥಾದ ಮೇಲೆ ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದರು. ಲಾರ್ಟಿ ಚಾರ್ಜ್ ನಡೆಸಿದ್ದರು. ರ್ಯಾಲಿಗೆ ನೇತೃತ್ವ ನೀಡಿದ್ದ ಭೀಮ್ ಆರ್ಮಿಯ ಚಂದ್ರಶೇಖರ್ ಆಝಾದ್ ಸಹಿತ ನೂರಾರು ಮಂದಿಯನ್ನು ದಿಲ್ಲಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು.












