ಚಿನ್ನ ಬೆಳ್ಳಿಯನ್ನಲ್ಲ, ಖಡ್ಗ ಖರೀದಿಸಿ ಇಟ್ಟುಕೊಳ್ಳಿ- ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ನಾಯಕ

0
548

ಸನ್ಮಾರ್ಗ ವಾರ್ತೆ

ನೊಯಿಡ,ಅ.21: ಚಿನ್ನ, ಬೆಳ್ಳಿಯನ್ನಲ್ಲ ಕಬ್ಬಿಣದ ಖಡ್ಗ ಖರೀದಿಸಿ ಧನ್‍ತೆರ ಆಚರಣೆ ಮಾಡಿ ಎಂದು ಉತ್ತರಪ್ರದೇಶ ಕಾರ್ಯಕರ್ತರಿಗೆ ಬಿಜೆಪಿ ನಾಯಕ ಕರೆ ನೀಡಿದ್ದಾರೆ. ದೇವ್‍ಬಂದ್ ಬಿಜೆಪಿ ಅಧ್ಯಕ್ಷ ಗಜ್‍ರಾಜ್ ರಾಣ ಖಡ್ಗ ಖರೀದಿಸಿಟ್ಟರೆ ಮುಂದೆ ಉಪಯೋಗಕ್ಕೆ ಬರಬಹುದು ಎಂದು ಹೇಳಿ ವಿವಾದ ಸೃಷ್ಟಿಸಿದ್ದಾರೆ.

ಅಯೋಧ್ಯೆ ಪ್ರಕರಣದಲ್ಲಿ ಸುಪ್ರೀಂಕೋರ್ಟಿನ ತೀರ್ಪು ಬರಲಿದೆ. ಅದು ರಾಮಮಂದಿರಕ್ಕೆ ಪೂರಕವಾಗಿರಬಹುದು ಎಂಬ ವಿಶ್ವಾಸ ಇದೆ. ಏನೆ ಇದ್ದರೂ ತೀರ್ಪು ಪರಿಸ್ಥಿತಿಯನ್ನು ಬುಡಮೇಲು ಗೊಳಿಸಬಹುದು. ಆದ್ದರಿಂದ ಚಿನ್ನ, ಬೆಳ್ಳಿ ಆಭರಣದ ಬದಲು ಕಬ್ಬಿಣದ ಖಡ್ಗ ಖರೀದಿಸಿ ಇಟ್ಟುಕೊಳ್ಳುವುದು ಉತ್ತಮ ಎಂದು ಅವರು ಸಲಹೆ ನೀಡಿದರು. ಅಂತಹ ಪರಿಸ್ಥಿತಿಯಲ್ಲಿ ಸುರಕ್ಷಿತತೆಗೆ ಅದು ಉಪಯುಕ್ತವಾಗಬಹುದು ಎಂದು ಗಜ್‍ರಾಜ್ ಹೇಳಿದ್ದಾರೆ.

ಅಯೋಧ್ಯೆಯಲ್ಲಿ ಶ್ರೀರಾಮನ ಬೃಹತ್ ಮಂದಿರ ಕಟ್ಟಬೇಕೆಂದು ದೇಶದ ಪ್ರಜೆಗಳು ಬಯಸುತ್ತಾರೆ. ಹಾಗೆ ಆದರೆ ಎಲ್ಲರಿಗೂ ಶ್ರೀರಾಮನ ಮಹತ್ತಾದ ದರ್ಶನ ಲಭಿಸಬಹುದಷ್ಟೇ. ದೀಪಾವಳಿ ಹಬ್ಬಕ್ಕೆ ಚಾಲನೆ ಕೊಡುವ ದಿನ ಧನ್‍ತೇರಾ ಆಗಿದೆ.