ಮುಂದಿನ ಸರದಿ ನಿಮ್ಮದು; ಉತ್ತರ ಪ್ರದೇಶದ ನವನಿರ್ಮಾಣ ಸೇನೆಯ ನಾಯಕನಿಗೆ ಕೊಲೆ ಬೆದರಿಕೆ!

0
775

ಸನ್ಮಾರ್ಗ ವಾರ್ತೆ

ಲಕ್ನೊ,ಅ.21: ಉತ್ತರಪ್ರದೇಶದಲ್ಲಿ ಹಿಂದೂ ಸಮಾಜ್ ಪಾರ್ಟಿ ನಾಯಕ ಕಮಲೇಶ್ ತಿವಾರಿ ಕೊಲೆಯಾದ ಘಟನೆಯ ಬೆನ್ನಿಗೆ ಇನ್ನೊಬ್ಬ ನಾಯಕನಿಗೆ ಬೆದರಿಕೆ ಪತ್ರ ಬಂದಿದೆ. ನವ ನಿಮಾರ್ಣ ಸೇನಾ ನಾಯಕ ಅಮಿತ್ ಜಾನಿ ಎಂಬವರಿಗೆ ಕೊಲೆ ಬೆದರಿಕೆ ಹಾಕಿದ ಪತ್ರ ಬಂದಿದೆ.

ಕಮಲೇಶ್ ತಿವಾರಿಯ ನಂತರ ನೀವು ಕೊಲೆಯಾಗುವಿರಿ ಎಂದು ಅಮಿತ್ ಜಾನಿಯ ಕುರಿತು ಪತ್ರದಲ್ಲಿ ತಿಳಿಸಲಾಗಿದೆ. ಬೇರೆ ವಿವರಗಳು ಪತ್ರದಲ್ಲಿ ಇಲ್ಲ.

ಮಹಿಳೆಯೊಬ್ಬಳು ಅಮಿತ್ ಜಾನಿಯ ನೊಯಿಡಾದ ಮನೆಗೆ ರವಿವಾರ ಬಂದು ಭದ್ರತಾ ಗಾರ್ಡ್‌ಗೆ ಪತ್ರ ನೀಡಿದ್ದಾಳೆ ಪತ್ರವನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಶುಕ್ರವಾರ ಸಂಜೆ ಕಮಲೇಶ್ ತಿವಾರಿ ಮನೆಯಲ್ಲಿಯೇ ಹತ್ಯೆಯಾಗಿದ್ದರು. ಕಮಲೇಶ್ ತಿವಾರಿ ಕೊಲೆಗೆ ಸಂಬಂಧಿಸಿ ಐವರನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದಾರೆ.