ಹೊಸದಿಲ್ಲಿ,ಅ.23: ಕಥುವಾದಲ್ಲಿ ಎಂಟು ವರ್ಷದ ಬಾಲಕಿಯ ಸಾಮೂಹಿಕ ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ತನಿಖೆ ನಡೆಸಿದ ಕ್ರೈಂ ಬ್ರಾಂಚ್ ವಿಶೇಷ ತನಿಖಾ ತಂಡದ(ಎಸ್ಐಟಿ) ಆರು ಸದಸ್ಯರ ವಿರುದ್ಧ ಕೇಸು ದಾಖಲಿಸಲು ಕೋರ್ಟು ಆದೇಶ ನೀಡಿದ್ದಾರೆ. ತಪ್ಪಾದ ಹೇಳಿಕೆ ನೀಡಲು ಸಾಕ್ಷಿಗಳ ಮೇಲೆ ಒತ್ತಡ ಹೇರಿದ್ದಲ್ಲದೆ, ಹೊಡೆದಿದ್ದಾರೆ ಎಂಬ ದೂರಿನಲ್ಲಿ ಅವರ ವಿರುದ್ಧ ಕೇಸು ದಾಖಲಿಸಲು ಕೋರ್ಟು ಆದೇಶ ಹೊರಡಿಸಿದೆ.
ಮಾಜಿ ಪೊಲೀಸ್ ಸುಪರಿಡೆಂಟ್ ಆರ್.ಕೆ ಜಲ್ಲ, ಎಎಸ್ಪಿ ಪಿರ್ಸಾದ ನವೀದ್, ಡೆಪ್ಯೂಟಿ ಪೊಲೀಸ್ ಸುಪರಿಡೆಂಟ್ಗಳಾದ ಶೆದಂಬರಿ ಶರ್ಮ, ನಿಸಾರ್ ಹುಸೈನ್, ಎಸ್ಐ ಅರ್ಫಾನ್ ವಾನಿ, ಕ್ರೈಂ ಬ್ರಾಂಚ್ನ ಕೇವಲ್ ಕಿಶೋರ್ರ ವಿರುದ್ಧ ಕೇಶು ದಾಖಲಿಸಲು ಜಮ್ಮು-ಕಾಶ್ಮೀರ ಪೊಲೀಸ್ ಸುಪರಿಡೆಂಟ್ ತೆಜಿಂದರ್ ಸಿಂಗ್ಗೆ ಕೋರ್ಟು ಆದೇಶಿಸಿದೆ. ನವೆಂಬರ್ ಏಳರ ವಿಚಾರಣೆಯ ವೇಳೆ ಈ ಕುರಿತು ವರದಿ ಸಲ್ಲಿಸುವಂತೆ ಕೋರ್ಟು ಆದೇಶಿಸಿದೆ.












