ಡಿಕೆ ಶಿವಕುಮಾರ್‌ಗೆ ಶರ್ತಬದ್ಧ ಜಾಮೀನು

0
705

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.23: ರಾಜ್ಯ ಕಾಂಗ್ರೆಸ್ ನಾಯಕ, ಶಾಸಕ ಡಿ.ಕೆ. ಶಿವಕುಮಾರ್‌ರಿಗೆ ದಿಲ್ಲಿ ಹೈಕೋರ್ಟು ಜಾಮೀನು ಮಂಜೂರು ಮಾಡಿದೆ. 25 ಲಕ್ಷ ರೂಪಾಯಿ ಮತ್ತು ಇಬ್ಬರು ವ್ಯಕ್ತಿಗಳ ಮುಚ್ಚಳಿಕೆ ಪಡೆದು ಜಾಮೀನು ಜಾರಿಗೊಳಿಸಿದೆ. ಕೋರ್ಟಿನ ಅನುಮತಿ ಪಡೆಯದೆ ದೇಶದಿಂದ ಅವರು ಹೊರಗೆ ಹೋಗಬಾರದೆಂದು ಶರ್ತವನ್ನೂ ವಿಧಿಸಿದೆ.

ಕಪ್ಪುಹಣ ಬಿಳಿಮಾಡಿದ್ದಕ್ಕೆ ಸಂಬಂಧಿಸಿದ ಕೇಸಿನಲ್ಲಿ ಸೆಪ್ಟಂಬರ್ ಮೂರರಂದು ಡಿಕೆಶಿಯವರನ್ನು ಇಡಿ ಬಂಧಿಸಿತ್ತು. ಶಿವಕುಮಾರ್ ಈಗ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಕಾಂಗ್ರೆಸ್ ಶಾಸಕ ಶಿವಕುಮಾರ್ ಮತ್ತು ಇತರ ಏಳು ಮಂದಿಯ ವಿರುದ್ಧ ಕಪ್ಪುಹಣ ಬಿಳಿ ಮಾಡಿದ ಆರೋಪದಲ್ಲಿ ಕೇಸು ಹಾಕಲಾಗಿತ್ತು. ಇಂದು ಬೆಳಗ್ಗೆ ಶಿವಕುಮಾರ್‌ರನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಭೇಟಿಯಾಗಿದ್ದರು.