ಮುಖ್ಯಮಂತ್ರಿ ಸ್ಥಾನಕ್ಕೆ ಕಣ್ಣಿಟ್ಟಿರುವ ಶಿವಸೇನೆ: ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ!

0
881

ಸನ್ಮಾರ್ಗ ವಾರ್ತೆ

ಮುಂಬೈ,ಅ.26: ಮಹಾರಾಷ್ಟ್ರದಲ್ಲಿ ಬಿಜೆಪಿಯ ಸರಕಾರ ರಚಿಸುವುದನ್ನು ಬುಡಮೇಲು ಗೊಳಿಸಲು ಯತ್ನಿಸುವುದಿಲ್ಲ ಎಂದು ಕಾಂಗ್ರೆಸ್ ಎನ್‍ಸಿಪಿ ಸ್ಪಷ್ಟಪಡಿಸಿದರೂ ಶಿವಸೇನೆ ಒತ್ತಡ ತಂತ್ರ ಹಾಕುತ್ತಿದೆ.

ಬಿಜೆಪಿಗೆ 105 ಸೀಟುಗಳು ಮಾತ್ರ ಇವೆ. ಸರಕಾರ ರಚಿಸಲು 145 ಸೀಟುಗಳು ಬೇಕಿದ್ದು, ಶಿವಸೇನೆಯ 56 ಸೀಟುಗಳ ಅಗತ್ಯವಿದೆ. ಮುಖ್ಯಮಂತ್ರಿ ಸ್ಥಾನ, ಸರಕಾರದಲ್ಲಿ ಸಮಾನ ಪಾಲ್ದಾರಿಕೆಯನ್ನು ಶಿವಸೇನೆ ಮುಂದಿಟ್ಟಿದೆ.

ಇದೇ ವೇಳೆ, ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಹೈಕಮಾಂಡ್ ದಾರಿ ಕಂಡುಕೊಳ್ಳಬೇಕೆಂದು ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಹೇಳುತ್ತಿದ್ದಾರೆ. ಆದಿತ್ಯ ಠಾಕ್ರೆ ಭವಿಷ್ಯದ ಮುಖ್ಯಮಂತ್ರಿ ಎಂದು ಶಿವಸೇನೆ ಪ್ರತಿಪಾದಿಸಿ ಬಿಜೆಪಿಯನ್ನು ಒತ್ತಡಕ್ಕೆ ದೂಡಿ ಹಾಕಿತ್ತು.

ಸೇನೆಯೊಂದಿಗೆ ಸೇರುವುದಿಲ್ಲ ಎಂದು ಹೇಳುವ ಸಂದರ್ಭದಲ್ಲಿಯೇ ಬಿಜೆಪಿಯಿಂದ ಪೂರ್ಣ ಮುಕ್ತವಾಗಿ ಸೇನೆ ಬೆಂಬಲ ಕೇಳಿದರೆ ಅಂತಿಮ ನಿರ್ಧಾರ ಹೈಕಮಾಂಡ್ ಮಾಡಲಿದೆ ಎಂದು ಮಧ್ಯಪ್ರದೇಶ ಕಾಂಗ್ರೆಸಿನ ಅಧ್ಯಕ್ಷ ಬಾಲಸಾಹೇಬ್ ತೊರಾಟ್ ಹೇಳಿದ್ದಾರೆ. ಕಾಂಗ್ರೆಸ್ಸಿಗೆ 44 ಶಾಸಕರು. ಎನ್‍ಸಿಪಿಗೆ 54 ಶಾಸಕರು ಇದ್ದಾರೆ.

ಇನ್ನೂ ಬಿಜೆಪಿ, ಶಿವಸೇನೆ ಒಟ್ಟಿಗೆ ಕೂತು ಚರ್ಚಿಸಲು ಆರಂಭಿಸಿಲ್ಲ. ಶಿವಸೇನೆಯ ಹಿರಿಯ ನಾಯಕರು ಪಾರ್ಟಿ ಅಧ್ಯಕ್ಷ ಉದ್ಧವ್ ಠಾಕ್ರೆಯನ್ನು ಭೇಟಿಯಾಗಿದ್ದಾರೆ. ಹೊಸ ಶಾಸಕರು ಶನಿವಾರ ಉದ್ಧವ್‍ರೊಂದಿಗೆ ಚರ್ಚಿಸುವರು.

ಸರಕಾರ ರಚಿಸುವುದಕ್ಕಾಗಿ ದೀಪಾವಳಿ ನಂತರ ಗುರುವಾರ ರಾಜ್ಯಪಾಲರನ್ನು ಭೇಟಿಯಾಗುವುದಾಗಿ ಬಿಜೆಪಿ ಮೂಲಗಳು ಹೇಳಿವೆ. ಇದೇ ವೇಳೆ ಅಮಿತ್ ಶಾ ಉದ್ಧವ್ ಠಾಕ್ರೆಗೆ ಅಭಿನಂದನೆ ಸಲ್ಲಿಸಿ ಫೋನ್ ಕರೆ ಮಾಡಿರುವುದಾಗಿ ಶಿವಸೇನೆಯ ಮೂಲಗಳು ತಿಳಿಸಿವೆ.