ಭಾರತೀಯರು ವೀಸಾ ಇಲ್ಲದೇ ಇನ್ನು ಬ್ರೆಜಿಲ್‍ಗೆ ಪ್ರಯಾಣಿಸಬಹುದು

0
494

ಸನ್ಮಾರ್ಗ ವಾರ್ತೆ

ಬ್ರಿಝೀಲಿಯ,ಅ.26:ಬ್ರೆಜಿಲ್‍ಗೆ ಇನ್ನು ಭಾರತೀಯರು ಹಾಗೂ ಚೀನಾದವರು ವೀಸಾ ಇಲ್ಲದೇ ಪ್ರಯಾಣಿಸಬಹುದು. ಚೀನಾ ಭೇಟಿಯಲ್ಲಿರುವ ಬ್ರೆಜಿಲ್ ಅಧ್ಯಕ್ಷ ಜೇರ್ ಬೊಲ್ಸಾನೊರೊ ಹೀಗೆ ಹೇಳಿದ್ದು ತೀವ್ರ ಬಲಪಂಥೀಯ ಬೊಲ್ಸನಾರೊ ಈ ವರ್ಷ ಅಧಿಕಾರಕ್ಕೆ ಬಂದಿದ್ದಾರೆ.  ಅವರು ತಮ್ಮ ಹೊಸ ನೀತಿಯನ್ನು ಚೀನಾ ಪ್ರವಾಸದ ವೇಳೆ ಪ್ರಕಟಿಸಿದರು. ಈ ಹಿಂದೆ ಅಮೆರಿಕ, ಕೆನಡಾ, ಜಪಾನ್, ಆಸ್ಟ್ರೇಲಿಯಾದ ಪ್ರವಾಸಿಗರಿಗೆ, ವ್ಯಾಪಾರಾರ್ಥಿಗಳಿಗೆ ವೀಸಾ ಇಲ್ಲದೆ ಬ್ರೆಜಿಲ್ ಸಂದರ್ಶಿಸುವ ಅನುಮತಿ ಇತ್ತು. ಆದರೆ, ಈ ದೇಶಗಳು ಬ್ರೆಜಿಲ್‍ನ ನಿವಾಸಿಗಳಿಗೆ ವೀಸಾದಲ್ಲಿ ವಿನಾಯತಿ ತೋರಿಸಿಲ್ಲ.