ಹಿರಿಯ ಕಮ್ಯುನಿಸ್ಟ್ ನಾಯಕ ಗುರುದಾಸ್ ಗುಪ್ತ ನಿಧನ

0
501

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.31: ಹಿರಿಯ ಸಿಪಿಎಂ ನಾಯಕ ಗುರುದಾಸ್ ಗುಪ್ತ ನಿಧನರಾಗಿದ್ದಾರೆ. ಗುರುವಾರ ಕೊಲ್ಕತಾದ ವಸತಿಯಲ್ಲಿ ಅವರು ತನ್ನ 83ನೆ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಬಹುಕಾಲದಿಂದ ಹೃದಯ ಮತ್ತು ಕಿಡ್ನಿ ಅಸೌಖ್ಯದಿಂದ ಬಳಲುತ್ತಿದ್ದರು. ಕೊಲ್ಕತಾದ ನ್ಯೂಟೌನ್‍ನ ಒಂದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು.

1980ರಲ್ಲಿ ಅವರ ರಾಜಕೀಯ ಜೀವನ ಆರಂಭವಾಗಿತ್ತು. 1985ರಲ್ಲಿ ಅವರು ರಾಜ್ಯಸಭೆ ಸದಸ್ಯರಾಗಿದ್ದರು. ಆಲ್ ಇಂಡಿಯ ಟ್ರೇಡ್ ಕಾಂಗ್ರೆಸ್‍ನ(ಎಐಟಿಯುಸಿ) ಪ್ರಧಾನ ಕಾರ್ಯದರ್ಶಿಯಾಗಿ 2001ರಲ್ಲಿ ಗುಪ್ತ ಚುನಾಯಿತರಾಗಿದ್ದರು.
2004ರಲ್ಲಿ ಪಶ್ಚಿಮ ಬಂಗಾಳದ ಪನ್ಸ್‌ಕುರದಿಂದ ಲೋಕಸಭೆಗೆ ಚುನಾಯಿತರಾಗಿದ್ದರು. 2009ರಲ್ಲಿ ಪಶ್ಚಿಮ ಬಂಗಾಳದ ಘಟಾಲದಿಂದ ಹದಿನೈದನೆ ಲೋಕಸಭೆಗೆ ಸಂಸದರಾಗಿ ಆಯ್ಕೆಯಾಗಿದ್ದರು.

ಪಾರ್ಲಿಮೆಂಟಿನಲ್ಲಿ ಹಲವಾರು ಪ್ರಮುಖ ವಿಷಯಗಳನ್ನೆತ್ತಿ ಯಶಸ್ವಿಯಾಗಿದ್ದರು. 2014ರಲ್ಲಿ ಚುನಾವಣಾ ರಾಜಕೀಯದಿಂದ ನಿವೃತ್ತರಾಗುವುದಾಗಿ ಘೋಷಿಸಿದ್ದರು. ಜಯಶ್ರೀ ದಾಸ್ ಗುಪ್ತ ಅವರ ಪತ್ನಿಯಾಗಿದ್ದಾರೆ.