ಸನ್ಮಾರ್ಗ ವಾರ್ತೆ
ಮುಂಬೈ,ಅ.31: ಮಹಾರಾಷ್ಟ್ರದಲ್ಲಿ ಎನ್ಸಿಪಿಯ ಸದನ ನಾಯಕನಾಗಿ ಅಜಿತ್ ಪವಾರ್ ಆಯ್ಕೆಯಾಗಿದ್ದಾರೆ. ಪಾರ್ಟಿಯ ಶಾಸಕರ ಸಭೆಯಲ್ಲಿ ಅಜಿತ್ ಶಾಸಕಾಂಗ ಪಕ್ಷ ನಾಯಕನಾಗಿ ಆಯ್ಕೆಯಾದರು. ವಿಧಾನ ಪರಿಷತ್ನಲ್ಲಿ ಧನಂಜಯ್ ಮುಂಡೆ ಪ್ರತಿಪಕ್ಷ ನಾಯನಾಗಿದ್ದು ಅವರ ಹೆಸರು ಕೂಡ ಪರಿಗಣನೆಯಲ್ಲಿತ್ತು.
ಮಹಾರಾಷ್ಟ್ರದಲ್ಲಿ ಎನ್ಸಿಪಿಗೆ 54 ಶಾಸಕರಿದ್ದಾರೆ. ಸಖ್ಯಪಕ್ಷ ಕಾಂಗ್ರೆಸ್ಸಿಗೆ 44 ಮಂದಿ ಶಾಸಕರಿದ್ದಾರೆ. ಇದೇ ವೇಳೆ ಮಹಾರಾಷ್ಟ್ರದಲ್ಲಿ ಶಿವಸೇನೆ, ಬಿಜೆಪಿ ಸರಕಾರ ರಚಿಸುವ ಕುರಿತ ವಿವಾದ ಇನ್ನೂ ತಣ್ಣಗಾಗಿಲ್ಲ. ಇದಲ್ಲದೇ, ಶಿವಸೇನೆ, ಎನ್ಸಿಪಿ ಸರಕಾರ ರಚಿಸುವ ಸಾಧ್ಯತೆಯೂ ಗರಿಕೆದರಿಕೊಂಡಿದೆ.












