ಯುಎಇಯಿಂದ ಸಂಚಾರ ಕ್ಷೇತ್ರದಲ್ಲಿ ಕ್ರಾಂತಿಕಾರಿ ಯೋಜನೆ

0
14

ಸನ್ಮಾರ್ಗ ವಾರ್ತೆ

ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಪ್ರಯಾಣವನ್ನು ಸುಲಭಗೊಳಿಸಲು ದುಬೈ ಭೂ ಮತ್ತು ವಾಯು ಮಾರ್ಗದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಸಿದ್ಧಪಡಿಸುತ್ತಿದೆ.

ಮುಂದಿನ ಐದು ವರ್ಷಗಳಲ್ಲಿ ಇತ್ತಿಹಾದ್ ರೈಲು ಹೊಸ ಅಲ್ ಮಕ್ತ್ತೂಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಲುಗಡೆಯನ್ನು ಹೊಂದುತ್ತದೆ ಎಂದು ದುಬೈ ವಿಮಾನ ನಿಲ್ದಾಣಗಳ ಸಿ ಇ ಓ ಪಾಲ್ ಗ್ರಿಫಿಟ್ಸ್ ಹೇಳಿದ್ದಾರೆ.

ದುಬೈ ಮೆಟ್ರೋವನ್ನು ಹೊಸ ವಿಮಾನ ನಿಲ್ದಾಣಕ್ಕೆ ವಿಸ್ತರಿಸುವ ಯೋಜನೆಗೆ ಇತ್ತೀಚಿಗೆ ಅನುಮೋದನೆ ನೀಡಲಾಗಿದೆ. ದುಬೈ ಕ್ರೌನ್ ಪ್ರಿನ್ಸ್ ಶೇಕ್ ಹಂದಾನ್ ಅವರು 2031ರಲ್ಲಿ ಇಲ್ಲಿ ಮೆಟ್ರೋ ಸೇವೆಗಳು ಪ್ರಾರಂಭವಾಗಲಿವೆ ಎಂದು ಈ ಹಿಂದೆ ಘೋಷಿಸಿದ್ದರು. ಇತ್ತಿಹಾದ್ ರೈಲು ಕೂಡ ವಿಮಾನ ನಿಲ್ದಾಣವನ್ನು ತಲುಪಲಿದೆ.