ಬೈರೂತ್,ನ.1: ಹತ್ಯೆಯಾದ ಎನ್ನಲಾದ ಐಎಸ್ ಮುಖ್ಯಸ್ಥ ಅಬೂಬಕರ್ ಅಲ್ ಬಗ್ದಾದಿಯ ಉತ್ತರಾಧಿಕಾರಿಯಾಗಿ ಅಬೂ ಇಬ್ರಾಹೀಂ ಅಲ್ ಹಾಶ್ಮಿ ಆಯ್ಕೆಯಾಗಿದ್ದಾನೆ ಎಂದು ಧ್ವನಿ ಮುದ್ರಿತ ಸಂದೇಶವನ್ನು ಐಎಸ್ ವಕ್ತಾರ ಕಳುಹಿಸಿದ್ದಾನೆ. ಐಎಸ್ನ ಮಾಧ್ಯಮ ವಿಭಾಗವಾದ ಅಲ್ ಫುರ್ಖಾನ್ ಫೌಂಡೇಶನ್ ಧ್ವನಿ ಮುದ್ರಿತ ಸಂದೇಶವನ್ನು ಕಳುಹಿಸಿದೆ. ಬಗ್ದಾದಿಯ ಸಹಾಯಕ ಅಬೂ ಹಸನ್ ಅಲ್ ಮುಹಾಜಿರ್ ಮೃತಪಟ್ಟಿದ್ದನ್ನು ವಕ್ತಾರ ದೃಢಪಡಿಸಿದ್ದಾನೆಂದು ವರದಿಯಾಗಿದೆ.












