ಸನ್ಮಾರ್ಗ ವಾರ್ತೆ
ಪಶ್ಚಿಮ ಗಾಝಾ ನಗರದಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್ ನ ಆಂತರಿಕ ಭದ್ರತಾ ವಿಭಾಗದ ನಿರ್ದೇಶಕ ನಯೀಮ್ ಅಬು ನಹೆಲ್ ಮೃತಪಟ್ಟಿದ್ದಾರೆ ಎಂದು ಹಮಾಸ್ ಮೂಲಗಳು ತಿಳಿಸಿವೆ.
ಈ ದಾಳಿಯಲ್ಲಿ ಹದಿಹರೆಯದ ಯುವಕನೂ ಸೇರಿದಂತೆ ಒಟ್ಟು ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.
ಹಮಾಸ್ ಅಧೀನದಲ್ಲಿ ಕೆಲಸ ಮಾಡುತ್ತಿರುವ ಗಾಝಾ ಪೊಲೀಸ್ ಪಡೆಯ 23 ಮತ್ತು 33 ವರ್ಷದ ಇಬ್ಬರು ಪೊಲೀಸರು ಹತ್ಯೆಯಾದವರಲ್ಲಿ ಸೇರಿದ್ದಾರೆ.
2023 ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಿದ ಎರಡು ವರ್ಷಗಳ ನಂತರ 2025 ಅಕ್ಟೋಬರ್ ನಲ್ಲಿ ಕದನ ವಿರಾಮ ಜಾರಿಗೆ ಬಂದಿತ್ತು. ಆದರೆ ಇಸ್ರೇಲ್ ಪದೇ ಪದೇ ಈ ಕದನ ವಿರಾಮವನ್ನು ಉಲ್ಲಂಘಿಸುತ್ತಿದೆ.












