ವಿಚ್ಛೇದನದ ಕುರಿತು ಜಗಳ: ತಾಯಿಯನ್ನೇ ಕೊಂದ ಮಗಳು

0
734

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ನ.೪: ಸಂತೋಷ್ ಬಗ್ಲಾ ಎಂಬ ೮೧ ವರ್ಷದ ವೃದ್ಧೆ ತನ್ನ ಮಗಳು ವಿಚ್ಛೇದನ ಮಾಡಿಕೊಂಡಿದ್ದನ್ನು ವಿರೋಧಿಸಿ ಸದಾ ಮಗಳನ್ನು ಬೈಯುತ್ತಿದ್ದರು. ಇದರಿಂದ ಕೋಪಗೊಂಡ ಮಗಳು ನಿರು ಬಗ್ಲಾ(೪೭) ತಾಯಿಯನ್ನು ಕೊಲೆ ಮಾಡಿದ್ದಾಳೆ. ದಿಲ್ಲಿಯ ಹರಿನಗರದಲ್ಲಿ ಘಟನೆ ನಡೆದಿದೆ.

ಅಮ್ಮ ಸಂತೋಷ್ ಬಗ್ಲಾರ ಜೊತೆ ನಿರು ಬಗ್ಲಾ ವಾಸಿಸುತ್ತಿದ್ದಳು. ನಿರು ಬಗ್ಲಾ ಇತ್ತೀಚೆಗೆ ವಿಚ್ಛೇದನ ಪಡೆದುಕೊಂಡಿದ್ದಳು. ಇದರಿಂದ ಅಸಮಾಧಾನಗೊಂಡಿದ್ದ ತಾಯಿ ನಿರಂತರ ಮಗಳನ್ನು ಬೈಯುತ್ತಿದ್ದರು. ಜೊತೆಗೆ ಬೇರೆ ಮದುವೆ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದಳು. ಶನಿವಾರ ರಾತ್ರೆ ಇದಕ್ಕೆ ಸಂಬಂಧಿಸಿ ತಾಯಿ ಮಗಳ ನಡುವೆ ಜಗಳ ವಾಗಿತ್ತು. ನಿರು ಬಂಗ್ಲಾ ಕಬ್ಬಿಣದ ರಾಡ್‌ನಿಂದ ತಾಯಿಯ ತಲೆಗೆ ಬಡಿದಿದ್ದಾಳೆ. ತೀವ್ರ ಗಾಯಗೊಂಡ ಸಂತೋಷ್ ಬಗ್ಲಾ ಮೃತಪಟ್ಟರು.