ಕೊಳವೆ ಬಾವಿಗೆ ಬಿದ್ದ ಐದು ವರ್ಷದ ಬಾಲಕಿಯ ರಕ್ಷಣೆ

0
622

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ನ.೪:  ಹರಿಯಾಣದ ಹರ್‌ಸಿಂಗ್‌ಪುರ ಗ್ರಾಮದಲ್ಲಿ ಪಾಳು ಬಿದ್ದ ಕೊಳವೆ ಬಾವಿಗೆ ಐದು ವರ್ಷದ ಬಾಲಕಿ ಬಿದ್ದಿದ್ದು, ಕಳೆದ ಹತ್ತು ಗಂಟೆಗಳ ರಕ್ಷಣಾ ಕಾರ್ಯದಲ್ಲಿ ಬಾಲಕಿಯನ್ನು ರಕ್ಷಿಸಲಾಗಿದೆ. ರವಿವಾರ ರಾತ್ರೆ ೯:೩೦ಕ್ಕೆ ಶಿವಾನಿ ಎಂಬ ಐದು ವರ್ಷದ ಬಾಲಕಿ ಕೊಳವೆ ಬಾವಿಗೆ ಬಿದ್ದಿದ್ದಳು. ಐವತ್ತು ಅಡಿ ಆಳದ ಬಾವಿಯಿಂದ ಅವಳನ್ನು ರಕ್ಷಿಸಲಾಗಿದೆ.

ಕೊಳವೆ ಬಾವಿಗೆ ಆಕ್ಸಿಜನ್ ಪಂಪ್‌ ಮಾಡಲಾಗಿತ್ತು. ಸೋಮವಾರ ಬೆಳಗ್ಗೆ ಎಂಟು ಗಂಟೆಗೆ ಬಾಲಕಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತಮಿಳ್ನಾಡಿನ ತಿರುಚಿರಪ್ಪಳ್ಳಿಯಲ್ಲಿ ಬಿದ್ದ ಎರಡೂವರೆ ವರ್ಷದ ಬಾಲಕ ಸುರ್ಜಿತ್‌ನನ್ನು ರಕ್ಷಿಸಲು ಸಾಧ್ಯವಾಗಿರಲಿಲ್ಲ. ಮೂರುವರೆ ದಿವಸಗಳ ಕಾಲ ರಕ್ಷಣಾ ಕಾರ್ಯ ನಡೆದಿತ್ತು.