ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ನ.5: ಬಾಬರಿ ಮಸೀದಿ ಪ್ರಕರಣದಲ್ಲಿ ಸುಪ್ರೀಂಕೋರ್ಟಿನ ತೀರ್ಪು ಪ್ರಕಟವಾಗಲಿದ್ದು ಈ ವಿಷಯದಲ್ಲಿ ಭಾವನಾತ್ಮಕ, ಪ್ರಚೋದನಾತ್ಮಕ ಹೇಳಿಕೆ ನೀಡಬಾರದೆಂದು ಕಾರ್ಯಕರ್ತರು ಹಾಗೂ ವಕ್ತಾರರಿಗೆ ಬಿಜೆಪಿ ನಿರ್ದೇಶ ನೀಡಿದೆ.
ಸಂಯಮ ಪಾಲಿಸಬೇಕೆಂದು ಆರೆಸ್ಸೆಸ್ ಕೆಲವು ದಿವಸಗಳ ಹಿಂದೆ ಕಾರ್ಯಕರ್ತರಿಗೆ ತಿಳಿಸಿತ್ತು. ರಾಮ ಜನ್ಮಭೂಮಿಗೆ ಸಂಬಂಧಿಸಿ ಅನವಶ್ಯಕ ಹೇಳಿಕೆ ನೀಡಬಾರದು. ಪಾರ್ಟಿ ವಕ್ತಾರರು, ಸಾಮಾಜಿಕ ಮಾಧ್ಯಮ ವಿಭಾಗದ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ ಕೇಂದ್ರೀಯ ನಾಯಕರು ಆಗ್ರಹಿಸಿದ್ದಾರೆ.
ವಿವಾದ ಹೇಳಿಕೆ ಇತ್ಯಾದಿ ತಡೆಯುವ ಉಪಾಯಗಳ ಕುರಿತು ಪಾರ್ಟಿಯ ಸಾಮಾಜಿಕ ಮಾಧ್ಯಮ ವಿಭಾಗ ಸದಸ್ಯರಿಗೆ ಬಿಜೆಪಿ ಐಟಿ ವಿಭಾಗ ಮುಖ್ಯಸ್ಥ ಅಮಿತ್ ಮಾಳವೀಯ ವಿಶೇಷ ಅಧೀವೇಶನ ನಡೆಸಿದರು. ತೀರ್ಪು ತಮ್ಮ ಪರ ಬಂದರೂ ಸಂತೋಷ ಆಚರಣೆ ಮಾಡಬಾರದು ಎಂದು ಈ ಹಿಂದೆ ಸಂಘಪರಿವಾರ ನಾಯಕರು ತಮ್ಮ ಪ್ರಚಾರಕರಿಗೆ ಸೂಚಿಸಿತ್ತು.
ಇದೇ ವೇಳೆ, ಅಯೋಧ್ಯೆಯ ಜಿಲ್ಲಾಡಳಿತ ವಿವಿಧ ನಿಯಂತ್ರಣಗಳಿಗೆ ಆದೇಶ ಹೊರಡಿಸಿದೆ. ತೀರ್ಪಿನಲ್ಲಿ ಸಂತೋಷ, ದುಃಖವನ್ನು ಆಚರಿಸುವಂತಿಲ್ಲ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶ ಹೊರಡಿಸಿದ್ದಾರೆ. ಸಮಾಜಿಕ ಮಾಧ್ಯಮಗಳಿಗೆ ಈ ಸೂಚನೆ ಅನ್ವಯ ಎಂದಿದ್ದಾರೆ. ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದ ಉಪಕುಲಪತಿ ತಾರಿಕ್ ಮನ್ಸೂರ್ ಮುನ್ನೆಚ್ಚರಿಕೆ ವಹಿಸಲು ಸೂಚಿಸಿದ್ದಾರೆ.












