ಸನ್ಮಾರ್ಗ ವಾರ್ತೆ
ಮುಂಬೈ, ನ.13: ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆಯಾಗಿದ್ದರೂ ಸರಕಾರ ರಚಿಸುವ ಚರ್ಚೆಯಲ್ಲಿ ಕಾಂಗ್ರೆಸ್, ಎನ್ಸಿಪಿ, ಶಿವಸೇನೆ ತೊಡಗಿದೆ. ರಾಮ ಮಂದರಿ, ಸಮಾನ ಸಿವಿಲ್ ಕೋಡ್ ಮುಂತಾದ ವಿಷಯದಲ್ಲಿ ತದ್ವಿರುದ್ಧ ನಿಲುವು ಇರುವ ಶಿವಸೇನೆಯೊಂದಿಗೆ ಸರಕಾರದಲ್ಲಿ ಪಾಲ್ಗೊಳ್ಳುವುದು ಕಾಂಗ್ರೆಸ್ಗೆ ಇಷ್ಟವಿಲ್ಲ. ಇದು ತೀರ್ಮಾನ ತಡವಾಗಲು ಕಾರಣವೆನ್ನಲಾಗಿದೆ.
ಕನಿಷ್ಠ ಸಾಮಾನ್ಯ ಕಾರ್ಯಕ್ರಮ ರೂಪಿಸದೆ ಸಖ್ಯ ಸಾಧ್ಯವಿಲ್ಲ ಎಂದೂ ಕೆಲವು ಮುಖ್ಯ ವಿಷಯಗಳಲ್ಲಿ ಸ್ಪಷ್ಟತೆ ಅಗತ್ಯವಿದೆ ಎಂದೂ ಮುಂಬೈಯಲ್ಲಿ ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ರೊಂದಿಗೆ ಚರ್ಚೆಯಲ್ಲಿ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಹೇಳಿದರು.
ಎನ್ಸಿಪಿಯೊಂದಿಗೆ ಒಪ್ಪಂದವಾದ ಬಳಿಕ ಶಿವಸೇನೆಯೊಂದಿಗೆ ಚರ್ಚಿಸಲಾಗುವುದು ಎಂದು ಅವರು ಹೇಳಿದರು. ಹಲವು ವಿಷಯಗಳಲ್ಲಿ ಸ್ಪಷ್ಟತೆ ಅಗತ್ಯವೆಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಕೂಡ ಹೇಳಿದರು.
ಸೋಮವಾರ ರಾಜ್ಯಪಾಲರು ನೀಡಿದ ಗಡುವಿನೊಳಗೆ ಕಾಂಗ್ರೆಸ್ನ ಸಮ್ಮತಿ ಸಿಗದ್ದು ಶಿವಸೇನೆಗೆ ಸರಕಾರ ರಚಿಸುವ ಅವಕಾಶ ಕಳಕೊಳ್ಳಬೇಕಾಗಿ ಬಂದಿತ್ತು.
ಕಾಂಗ್ರೆಸ್ ವಿಸ್ತಾರವಾಗಿ ಚರ್ಚಿಸುವ ಪ್ರಸ್ತಾವ ಇಟ್ಟದ್ದರಿಂದ ಎನ್ಸಿಪಿಯೂ ಒಪ್ಪಿಗೆ ಪತ್ರ ಕೊಟ್ಟಿರಲಿಲ್ಲ. ಸೋಮವಾರ ರಾತ್ರೆ ಹತ್ತು ಗಂಟೆಯವರೆಗೂ ಕಾಂಗ್ರೆಸ್ನ ಸಮ್ಮತ ಪತ್ರಕ್ಕೆ ಶರದ್ ಪವಾರ್ ಕಾದಿದ್ದರು ಎಂದು ಎನ್ಸಿಪಿ ನಾಯಕ ಅಜಿತ್ ಪವಾರ್ ಹೇಳಿದ್ದರು.
ಚರ್ಚೆಗೆ ಬರುವುದು ಬೇಡ ಎಂದು ಪವಾರ್ ಹೇಳಿದ್ದರಿಂದ ಅಹ್ಮದ್ ಪಟೇಲ್, ಖರ್ಗೆ, ಕೆ.ಸಿ. ವೇಣುಗೋಪಾಲ್ ಪ್ರಯಾಣ ರದ್ದುಪಡಿಸಿದರು. ಮತ್ತು ಸಂಜೆಯ ವೇಳೆ ನಗರಕ್ಕೆ ಬಂದು ಪವಾರ್ರೊಂದಿಗೆ ಚರ್ಚಿಸಿದರು.
ಸಾಮಾನ್ಯ ಮಿನಿಮಯ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಸಮಾನ ಹದಿನಾಲ್ಕು ಸಚಿವ ಸ್ಥಾನ ಇರಬೇಕು ಎನ್ನುವುದು ಒಂದು. ಮುಖ್ಯಮಂತ್ರಿ ಸ್ಥಾನ ಶಿವಸೇನೆ ಮತ್ತು ಎನ್ಸಿಪಿಗೆ ಎರಡೂವರೆ ವರ್ಷ ಹಂಚಿಕೊಳ್ಳುವುದನ್ನು ಎನ್ಸಿಪಿಯೂ ಮುಂದಿಟ್ಟಿತು. ಕಾಂಗ್ರೆಸ್ ಎನ್ಸಿಪಿ ಸಹಮತಕ್ಕೆ ಬಂದ ಬಳಿಕ ಉದ್ಧವ್ ಠಾಕ್ರೆಯವರನ್ನು ಅವರು ಭೇಟಿಯಾಗಲಿದ್ದಾರೆ.












