17 ಅನರ್ಹ ಶಾಸಕರಿಗೆ ಬಿಗ್ ರಿಲೀಫ್: ಕೋರ್ಟು ಜಿದ್ದಾಜಿದ್ದಿನಲ್ಲಿ ಅನರ್ಹರ ಮೇಲುಗೈ: ಅನರ್ಹತೆಯ ಅವಧಿಯನ್ನು ಸ್ಪೀಕರ್ ನಿರ್ಧರಿಸುವಂತಿಲ್ಲ ಎಂದ ಕೋರ್ಟ್

0
992

ಸನ್ಮಾರ್ಗ ವಾರ್ತೆ-

ದೆಹಲಿ: ನ. 13- ರಾಜ್ಯದ 17 ಅನರ್ಹ ಶಾಸಕರ ಪ್ರಕರಣವನ್ನು ಸುಪ್ರೀಂ ಕೋರ್ಟು ಇತ್ಯರ್ಥಪಡಿಸಿದ್ದು, ಸ್ಪೀಕರ್ ರಮೇಶ್ ಕುಮಾರ್ ಅವರ ಅನರ್ಹತೆಯ ಆದೇಶವನ್ನು ಎತ್ತಿ ಹಿಡಿದಿರುವಂತೆಯೇ, ಅನರ್ಹತೆಗೇ ಅವಧಿ ನಿರ್ಣಯಿಸಲು ಸ್ಪೀಕರ್ ಗೆ ಅಧಿಕಾರವಿಲ್ಲ ಎಂದು ಹೇಳುವ ಮೂಲಕ ಅನರ್ಹ ಶಾಸಕರು ಉಪಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.

“ಸ್ಪೀಕರ್ ಅವರು ನೀಡಿರುವ ಅನರ್ಹತೆಯ ತೀರ್ಪನ್ನು ನಾವು ಒಪ್ಪಿದ್ದೇವೆ. ಆದರೆ, ಪ್ರಸಕ್ತ ವಿಧಾನ ಸಭೆಯ ಅವಧಿ ಮುಗಿಯುವವರೆಗೆ ಈ ಅನರ್ಹತೆಯು ಅಸ್ತಿತ್ವದಲ್ಲಿರುತ್ತದೆ ಅನ್ನುವ ವಾದವನ್ನು ನಾವು ಒಪ್ಪುವುದಿಲ್ಲ” ಎಂದು ನ್ಯಾಯಮೂರ್ತಿಗಳಾದ ಎಸ್ ವಿ ರಮಣ, ಸಂಜೀವ್ ಖನ್ನಾ ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡ ತ್ರಿ ಸದಸ್ಯ ಪೀಠ ತೀರ್ಪಿತ್ತಿದೆ. ಅನರ್ಹರ ನಡೆಯನ್ನು ಪ್ರೋತ್ಸಾಹಿಸುವುದು ಸಲ್ಲ ಎಂದೂ ಪೀಠ ಈ ಸಂದರ್ಭದಲ್ಲಿ ಹೇಳಿದೆ.

ಶಾಸಕರ ರಾಜೀನಾಮೆಯ ಬಗ್ಗೆ ಮಾತ್ರ ನಿರ್ಧರಿಸುವ ಅಧಿಕಾರ ಸ್ಪೀಕರ್ ಗೆ ಇದ್ದು, ಅನರ್ಹತೆಯ ಅವಧಿಯನ್ನು ಅವರು ನಿರ್ಧರಿಸುವಂತಿಲ್ಲ ಎಂದು ಹೇಳುವ ಮೂಲಕ ಪಕ್ಷಾಂತರ ನಿಷೇಧ ಕಾಯ್ದೆಯ ಕುರಿತಂತೆ ಇರುವ ಗೊಂದಲಗಳಿಗೆ ಕೋರ್ಟು ಉತ್ತರಿಸುವ ಸಾಧ್ಯತೆ ಕಾಣುತ್ತಿದೆ. ತೀರ್ಪಿನ ಸಂಪೂರ್ಣ ಪ್ರತಿ ಲಭ್ಯವಾದ ಮೇಲೆ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.