ಸನ್ಮಾರ್ಗ ವಾರ್ತೆ
ಮುಂಬೈ,ನ.13: ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿದ್ದಕ್ಕಾಗಿ ಬಿಜೆಪಿಯನ್ನು ಕಟುವಾಗಿ ಶಿವಸೇನೆ ಟೀಕಿಸಿದೆ. ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಜಂಟಿಯಾಗಿ ಬಿಜೆಪಿ ಮತ್ತು ಶಿವಸೇನೆ ಚುನಾವಣಾ ಪ್ರಣಾಳಿಕೆ ಬಿಡುಗಡೆಗೊಳಿಸಿತ್ತು. ಒಟ್ಟಿಗೆ ನಿಲ್ಲುವ ಒಪ್ಪಂದವೂ ಆಗಿತ್ತು. ಆದರೆ ಬಿಜೆಪಿ ಮಾತು ಪಾಲಿಸಿಲ್ಲ. ಮಹಾರಾಷ್ಟ್ರದ ಮಣ್ಣಿನ ಆತ್ಮಾಭಿಮಾನಕ್ಕೆ ಬಿಜೆಪಿ ಮಾತು ಪಾಲಿಸಬೇಕಿತ್ತು ಎಂದು ಸಾಮ್ನಾ ಹೇಳಿದೆ.
ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆಯ ರಾಜ್ಯಪಾಲರ ತೀರ್ಮಾನ ಸಂವಿಧಾನ ವಿರೋಧಿ ಮತ್ತು ವಂಚನೆಯಾಗಿದೆ. ರಾಜ್ಯಪಾಲರ ಕ್ರಮ ಶಾಸಕರ ಖರೀದಿಗೆ ದಾರಿ ಮಾಡಿದೆ. ರಾಜ್ಯಪಾಲರು ಪಕ್ಷಾತೀತರಾಗಿ ಕೆಲಸ ಮಾಡಬೇಕಾಗಿದೆ ಎಂದು ಸಾಮ್ನಾ ಸಂಪಾದಕೀಯ ಹೇಳಿದೆ.












