ಸನ್ಮಾರ್ಗ ವಾರ್ತೆ
ಎಡಕ್ಕರ(ಕೇರಳ),ನ.26: ವಯನಾಡ್ ಲೋಕಸಭಾ ಕ್ಷೇತ್ರದ ಸಂಸದ ರಾಹುಲ್ ಗಾಂಧಿ ನಾಪತ್ತೆಯಾಗಿದ್ದಾರೆ ಎಂದು ಎಡಕ್ಕರ ಪೊಲೀಸರಿಗೆ ದೂರು ಬಂದಿದೆ. ಕ್ಷೇತ್ರದಲ್ಲೂ ಇಲ್ಲ. ಪಾರ್ಲಿಮೆಂಟಿನಲ್ಲೂ ಇಲ್ಲ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿಯೂ ದರ್ಶನವಿಲ್ಲ. ಈ ಅಸ್ಪಷ್ಟತೆಯನ್ನು ನಿವಾರಿಸಿ ಕೊಡಿ ಎಂದು ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಅಜಿ ಥಾಮಸ್ ಎಡಕ್ಕರ ಪೊಲೀಸರಿಗೆ ದೂರು ನೀಡಿದ್ದಾರೆ. ಕ್ಷೇತ್ರದ ಮತದಾರ, ಪ್ರಜೆ ಎಂಬ ನೆಲೆಯಲ್ಲಿ ತಾನು ರಾಹುಲ್ರ ನಾಪತ್ತೆಯಿಂದ ಆತಂಕಗೊಂಡಿದದೇನೆ ಎಂದು ಅಜಿ ಥಾಮಸ್ ದೂರಿನಲ್ಲಿ ಅಲವತ್ತುಕೊಂಡಿದ್ದಾರೆ.












