ಶಬರಿಮಲೆ: ಯುವತಿಯರ ಪ್ರವೇಶದ ಕುರಿತು ಸಂಘಪರಿವಾರಕ್ಕೆ ಮೊದಲೇ ಗೊತ್ತಾಗಿದ್ದು ಹೇಗೆ?: ಇಂಟಲಿಜೆನ್ಸ್ ತನಿಖೆ, ಉನ್ನತ ಅಧಿಕಾರಿಗಳಲ್ಲಿ ಆತಂಕ

0
667

ಸನ್ಮಾರ್ಗ ವಾರ್ತೆ

ಕೋಟ್ಟಯಂ,ನ.27: ಶಬರಿಮಲೆ ಸಂದರ್ಶನಕ್ಕೆ ತೃಪ್ತಿ ದೇಸಾಯಿ ಮತ್ತು ಸಂಗಡಿಗರು ಕೊಚ್ಚಿಗೆ ಬಂದು ತಲುಪಿರುವುದು ಸಂಘಪರಿವಾರ ಸಂಘಟನೆಗಳಿಗೆ ಮೊದಲೇ ಗೊತ್ತಾಗಿದ್ದು ಹೇಗೆ ಎನ್ನುವುದನ್ನು ಇಂಟಲಿಜೆನ್ಸ್ ತನಿಖೆ ಮಾಡುತ್ತಿದೆ.ಒಂದು ಚ್ಯಾನೆಲ್ ಕೂಡ ಅಲ್ಲಿರುವುದು ಪೊಲೀಸರನ್ನೇ ಪೇಚಿಗೆ ಸಿಲುಕಿಸಿದೆ.

ಶಬರಿಮಲೆಗೆ ಯುವತಿಯರು ಬಂದುದು ಶಬರಿಮಲೆ ತೀರ್ಥಯಾತ್ರೆಯನ್ನು ಬುಡುಮೇಲುಗೊಳಿಸುವ ಸಂಚು ಆಗಿದೆ. ಎಂದು ದೇವಸ್ವಂ ಸಚಿವರೇ ಹೇಳಿದ್ದರು. ಈ ಪರಿಸ್ಥಿತಿಯಲ್ಲಿ ಪ್ರತಿಭಟನಾಕಾರರಿಗೆ ಎಲ್ಲಿಂದ ಮಾಹಿತಿ ಸಿಕ್ಕಿತು ಎಂದು ತನಿಖೆ ನಡೆಯುತ್ತಿದೆ.

ಪೊಲೀಸರೇ ಸುದ್ದಿ ಸೋರಿಕೆ ಮಾಡಿದ ಶಂಕೆ ಇದೆ. ಈ ಹಿಂದೆಯೂ ಪೊಲೀಸರು ಹೀಗೆ ಮಾಡಿದ್ದಾರೆಂಬ ಆರೋಪ ಇತ್ತು. ತೃಪ್ತಿ ದೇಸಾಯಿ ನೆಡುಂಬಶ್ಶೇರಿ ವಿಮಾನ ನಿಲ್ದಾಣ ಮತ್ತು ನಗರ ಪೊಲೀಸ್ ಕಮಿಶನರ್ ಕಚೇರಿಗೆ ಬಂದಾಗ ಸಂಘಪರಿವಾರದವರು ಅಲ್ಲಿಗೆ ಬಂದಿದ್ದು ಸರಕಾರಕ್ಕೆ ಸವಾಲಾಗಿದೆ. ಪ್ರಮುಖ ವಿಷಯಗಳಲ್ಲಿ ಪೊಲೀಸರಿಂದ ಸೋರಿಕೆಯಾಗುವುದು ಉನ್ನತ ಪೊಲೀಸಧಿಕಾರಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.