ಸನ್ಮಾರ್ಗ ವಾರ್ತೆ
ಕೊಚ್ಚಿ,ನ.27: ಈ ಸಲದ ಮಂಡಲದಲ್ಲಿಯೇ ಶಬರಿಮಲೆ ದರ್ಶನ ಪಡೆಯುವೆ ಎಂದು ಬಿಂದು ಅಮ್ಮಿಣಿ ಹೇಳಿದ್ದಾರೆ. ಇದಕ್ಕಾಗಿ ಕಮಿಶನರ್ ಕಚೇರಿಗೆ ಸುರಕ್ಷೆ ಕೋರಿ ತೆರಳುವೆ. ಪೊಲೀಸರು ರಕ್ಷಣೆ ನೀಡಲೊಪ್ಪದಿದ್ದರೆ ಕೋರ್ಟಿನ ಮೊರೆ ಹೋಗುವೆ ಎಂದು ಹೇಳಿದರು.
ಯುವತಿಯರು ಶಬರಿ ಮಲೆಗೆ ತೆರಳಲು ಬಿಡುವುದಿಲ್ಲ ಎಂದು ಪೊಲೀಸರು ಯತ್ನಿಸುತ್ತಿದ್ದಾರೆ. ಕಮಿಶನರ್ ಕಚೇರಿ ಮುಂದೆ ಅಮ್ಮಿಣಿಗೆ ಹಿಂದೂ ಹೆಲ್ಪ್‌ಲೈನ್ ಕಾರ್ಯಕರ್ತರೊಬ್ಬರು ಮೆಣಸಿನ ಹುಡಿ ಸ್ಪ್ರೇ ಸಿಡಿಸಿದ್ದರು. ಆರೋಪಿಯ ವಿರುದ್ಧ ದುರ್ಬಲ ಕೇಸು ಹಾಕಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ದೌರ್ಜನ್ಯ ನಿರೋಧ ಪ್ರಕಾರ ಕೇಸು ಹಾಕಿಲ್ಲ. ಇದಕ್ಕೆ ಪೊಲೀಸರ ಷಡ್ಯಂತ್ರ ಕಾರಣ.
ತನ್ನ ಮೇಲೆ ಮೆಣಸಿನ ಹುಡಿ ಸ್ಪ್ರೇ ಮಾಡಿದ ವ್ಯಕ್ತಿಯನ್ನು ತೋರಿಸಿಯೂ ಪೊಲೀಸರು ನಿಷ್ಕ್ರಿಯರಾಗಿ ವರ್ತಿಸಿದರು. ಪ್ರಜೀಶ್ ವಿಶ್ವನಾಥನ್ ಮುಂತಾದವರು ತನಗೆ ಹೊಡೆಯಲು ಯತ್ನಿಸಿದರು ಎಂದು ಬಿಂದು ಆರೋಪಿಸಿದರು. ತೃಪ್ತಿ ದೇಸಾಯಿ ಮತ್ತು ಅವರ ಸಂಗಡಿಗರು ಕಮಿಶನರ್ ಕಚೇರಿಗೆ ಬಂದಾಗ ಹಿಂದೂ ಹೆಲ್ಫ್ ಲೈನ್‍ನ ಶ್ರೀನಾಥ್ ಎಂಬಾತ ಬಿಂದು ಮೇಲೆ ಮೆಣಸಿನ ಹುಡಿ ಎರಚಿದ್ದನು. ಈತನೀಗ ನ್ಯಾಯಾಂಗ ಬಂಧನದಲ್ಲಿದ್ದಾನೆ.












