ಸನ್ಮಾರ್ಗ ವಾರ್ತೆ-
ಕಾಠ್ಮಂಡು, ಡಿ. 9: ನೇಪಾಳದ ಋತುಚಕ್ರ ಗುಡಿಸಲಿನಲ್ಲಿ ಸಿಲುಕಿಕೊಂಡು ಬಾಲಕಿ ಮೃತಪಟ್ಟ ಘಟನೆಯಲ್ಲಿ ಸಂಬಂಧಿಕನ್ನು ಬಂಧಿಸಲಾಗಿದೆ. ನೇಪಾಳದ ಚೌಪಾಡಿ ಆಚಾರ ಕ್ರಮದಂತೆಋತುಮತಿಯಾದ ಪಾರ್ಬತಿ ಬುದ ರವತ್ ಎಂಬ 21 ವರ್ಷದ ತರುಣಿಯನ್ನು ಬೇರೆಯೇ ಉಳಕೊಳ್ಳಬೇಕಾದ ಗುಡಿಸಲಿನಲ್ಲಿರಿಸಲಾಗಿತ್ತು. ಆದರೆ, ಚಳಿಯಿಂದ ರಕ್ಷಣೆ ಪಡೆಯಲು ಗುಡಿಸಲಿನಲ್ಲಿ ಹಚ್ಚಲಾಗಿದ್ದ ಬೆಂಕಿ ಗುಡಿಸಲಿಗೆ ಹರಡಿ ಡಿಸೆಂಬರ್ ಮೊದಲ ವಾರದಲ್ಲಿ ಯುವತಿ ಮೃತಪಟ್ಟಿದ್ದಳು. ಆಕೆ ಸಂಬಂಧಿಕ ಜನಕ್ ಶಾಶಿಯನ್ನು ಪೊಲೀಸರು ಈ ಘಟನೆಯಲ್ಲಿ ಬಂಧಿಸಿದ್ದಾರೆ. ನೇಪಾಳದಲ್ಲಿ ಚೌಪಾಡಿ ಆಚರಣೆಗೆ ಸಂಬಂಧಿಸಿದಂತೆ ಮೊದಲಬಾರಿ ಬಂಧನ ನಡೆದಿದೆ. ದೇಶದ ಹಿಂದೂಗಳು ಚೌಪಾಡಿ ಆಚರಣೆ ಮಾಡುತ್ತಾರೆ. ಋತುಮತಿಯಾದ ಮಹಿಳೆಯನ್ನು ಸಣ್ಣ ಗುಡಿಸಲಿನಲ್ಲಿರಿಸಲಾಗುತ್ತಿದೆ. ಇದನ್ನು ಮಹಿಳೆಯರು ವಿರೋಧಿಸಿದರೆ ಬಲವಂತದಿಂದ ಅವರನ್ನು ಗುಡಿಸಲಿನಲ್ಲಿರಿಸಲಾಗುತ್ತದೆ. ಶತಮಾನಗಳಿಂದ ಈ ಆಚರಣೆಯು ಇಲ್ಲಿ ನಡೆಯುತ್ತಾ ಬಂದಿದೆ.
ಮಹಿಳೆಯರನ್ನು ಈ ರೀತಿಯಲ್ಲಿ ಬೇರೆಯೇ ಇರಿಸದಿದ್ದರೆ ಪೃಕೃತಿ ದುರಂತದಂತಹ ಆಪತ್ತು ಸಂಭವಿಸಬಹುದು ಎಂಬ ನಂಬಿಕೆ ಅಲ್ಲಿದೆ. 2005ರಲ್ಲಿ ನೇಪಾಳ ಸರಕಾರ ಈ ಆಚಾರವನ್ನು ನಿಷೇಧಿಸಿತ್ತು. 2017ರಲ್ಲಿ ಈ ಆಚಾರವನ್ನು ಕ್ರಿಮಿನಲ್ ಅಪರಾಧವಾಗಿ ಪರಿಗಣಿಸಲಾಗಿದೆ.












