ಎಡಪಕ್ಷಗಳಿಂದ ಪ್ರತಿಭಟನೆ ವಾರ ಘೋಷಣೆ

0
456

ಹೊಸದಿಲ್ಲಿ, ಡಿ. 27: CAA, NRC ಮತ್ತು NPR ವಿರುದ್ಧ ಜನವರಿ ಒಂದರಿಂದ ಏಳರ ವರೆಗೆ ದೇಶಾದ್ಯಂತ ಪ್ರತಿಭಟನಾ ವಾರ ಸಂಘಟಿಸಲು ಎಡಪಕ್ಷಗಳು ಮುಂದಾಗಿವೆ. ಸಿಪಿಎಂ,ಸಿಪಿಐ, ಸಿಪಿಐಎಂಎಲ್, ಆಲ್ ಇಂಡಿಯ ಫಾರ್ವಡ್ ಬ್ಲಾಕ್, ರೆವುಲೇಶನ್ ಸೋಶಿಯಲಿಸ್ಟ್ ಪಾರ್ಟಿ ಜಂಟಿಯಾಗಿ ಪ್ರತಿಭಟನಾ ಕಾರ್ಯಕ್ರಮ ಆಯೋಜಿಸಲಿದೆ.

ಜನವರಿ ಎಂಟಕ್ಕೆ ಸಾರ್ವಜನಿಕ ಮುಷ್ಕರ ಘೋಷಿಸಿದ ಟ್ರೇಟ್ ಯೂನಿಯನ್‍ಗಳೊಂದಿಗೆ ಚರ್ಚಿಸಿದ ಬಳಿಕ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಸಂಘಟನೆಗಳು ತಿಳಿಸಿವೆ. ವಿವಿಧ ರೈತ ಕಾರ್ಮಿಕ ಸಂಘಟನೆಗಳು ಜನವರಿ ಎಂಟಕ್ಕೆ ಘೋಷಿಸಿದ ಗ್ರಾಮೀಣ ಬಂದ್‍ಗೂ ಬೆಂಬಲ ನೀಡುವುದಾಗಿ ಎಡ ಪಾರ್ಟಿಗಳು ತಿಳಿಸಿವೆ.