ಸನ್ಮಾರ್ಗ ವಾರ್ತೆ-
ಹೊಸದಿಲ್ಲಿ, ಡಿ. 28: ಪೌರತ್ವ ತಿದ್ದುಪಡಿ ಕಾನೂನು ಅಸ್ತಿತ್ವಕ್ಕೆ ಬಂದ ಬಳಿಕ ಮೊದಲ ಬಾರಿ ಅಸ್ಸಾಂಗೆ ಭೇಟಿ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪೌರತ್ವ ತಿದ್ದುಪಡಿ ಕಾನೂನು ಎನ್ಆರ್ ಸಿ, ನೋಟು ನಿಷೇಧಧ ಎರಡನೆ ಭಾಗವಾಗಿದೆ ಎಂದು ಹೇಳಿದರು. ಕಾಂಗ್ರೆಸ್ ಸ್ಥಾಪಕ ದಿನದ ಪ್ರಯುಕ್ತ ರಾಹುಲ್ ಗಾಂಧಿ ಗುವಾಹಟಿಗೆ ಭೇಟಿ ನೀಡಿದ್ದಾರೆ. ಬಯಲು ಬಂಧೀಖಾನೆ ಕುರಿತು ನರೇಂದ್ರ ಮೋದಿ ಸುಳ್ಳು ಹೇಳುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದರು.
ಪೌರತ್ವ ತಿದ್ದುಪಡಿ ಕಾನೂನು, ಎನ್ಆರ್ ಸಿ, ನೋಟು ನಿಷೇಧದ ಎರಡನೆ ಭಾಗವಾಗಿದ್ದು ಬಡವರಲ್ಲಿ ಕೂಡ ಅವರು ಪೌರತ್ವ ಸಾಬೀತುಪಡಿಸಲು ಹೇಳುತ್ತಿದ್ದಾರೆ. ಬಡವರನ್ನು ಇದು ತುಂಬ ಕಷ್ಟಕ್ಕೆ ದೂಡಿದೆ ಎಂದು ಹೇಳಿದರು. ಈ ಹಿಂದೆ ಬಯಲು ಬಂಧೀಖಾನೆ ಕುರಿತು ರಾಹುಲ್ ಗಾಂಧಿ ರಂಗಪ್ರವೇಶಿಸಿದ್ದರು. ಅಸ್ಸಾಮಿನ ಚಿತ್ರವನ್ನು ಹಂಚಿಕೊಂಡು ಅವರು ಟ್ವೀಟ್ ಮಾಡಿದ್ದಾರೆ.












