ಪೌರತ್ವ ತಿದ್ದುಪಡಿ ಕಾನೂನಿಂದ ಭಾರತದ ಮುಸ್ಲಿಮರಿಗೆ ಹಾನಿಯಿದೆ- ಅಮೆರಿಕ ವರದಿ

0
1792

ಸನ್ಮಾರ್ಗ ವಾರ್ತೆ-

ವಾಷಿಂಗ್ಟನ್, ಡಿ .28: ಮೋದಿ ಸರಕಾರ ಜಾರಿಗೊಳಿಸುತ್ತಿರುವ ಪೌರತ್ವ ತಿದ್ದುಪಡಿ ಕಾನೂನು ಮತ್ತು ಎನ್‍ಆರ್ ಸಿಯು ಭಾರತದ ಮುಸ್ಲಿಮರ ಅಲ್ಪಸಂಖ್ಯಾತ ಸ್ಥಾನಮಾನಕ್ಕೆ ಬಾಧಕವಾಗಲಿದೆ ಎಂದು ಅಮೆರಿಕದ ವರದಿ ಹೇಳುತ್ತಿದೆ. ಡಿಸೆಂಬರ್ 18ಕ್ಕೆ ಹೊರಡಿಸಲಾದ ಅಮೆರಿಕನ್ ಕಾಂಗ್ರೆಸ್‍ ನ ಅಧೀನದ ಸಮಿತಿ (ಸಿಆರೆಸ್) ವರದಿಯಲ್ಲಿ ಭಾರತದ 20 ಕೋಟಿ ಮುಸ್ಲಿಮರ ಪಾಲಿಗೆ ಎನ್‍ಆರ್ ಸಿ, ಸಿಎಎಯು ಆತಂಕಕ್ಕೆ ಕಾರಣವಾಗಿದೆ ಎಂದು ಮುನ್ನೆಚ್ಚರಿಕೆಯನ್ನೂ ನೀಡಿದೆ.

ಅನಧಿಕೃತ ವಲಸೆಗಾರರ ಪೌರತ್ವವನ್ನು 1955ರ ಪೌರತ್ವ ಕಾನೂನು ನಿಷೇಧಿಸುತ್ತದೆ. ಹಲವು ತಿದ್ದುಪಡಿಗಳನ್ನು ಈ ಕಾನೂನೀನಲ್ಲಿ ಮಾಡಲಾಗಿದ್ದರೂ ಒಂದು ಧರ್ಮದ ಆಧಾರದಲ್ಲಿ ತಿದ್ದುಪಡಿ ಆಗಿರಲಿಲ್ಲ ಎಂದು ವರದಿ ಹೇಳುತ್ತಿದೆ. ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನದ ಮುಸ್ಲಿಮರು ಮುಸ್ಲಿಮೇತರನ್ನು ಸಹಿಸುವುದಿಲ್ಲ ಎಂದು ಹೇಳಿ ತಿದ್ದುಪಡಿ ಜಾರಿಗೊಳಿಸಲಾಗಿದೆ. ಆದರೆ ಯಾಕೆ ಶ್ರಿಲಂಕಾ, ಬರ್ಮದಂತಹ ದೇಶಗಳಲ್ಲಿ ಪೀಡನೆ ಅನುಭವಿಸುವ ಹಿಂದೂಗಳಿಗೆ ಪೌರತ್ವ ನೀಡುವುದಿಲ್ಲ ಎಂದು ವರದಿಯಲ್ಲಿ ಪ್ರಶ್ನಿಸಲಾಗಿದೆ. ಪಾಕಿಸ್ತಾನದಲ್ಲಿ ಪೀಡನೆಗೊಳಗಾದ ಮುಸ್ಲಿಂ ಅಲ್ಪಸಂಖ್ಯಾತರಾದ ಅಹ್ಮದಿಗಳಿಗೆ ಪೌರತ್ವ ನಿಷೇಧಿಸಲಾಗಿದೆ.

ಸುಪ್ರೀಂಕೋರ್ಟಿನ ಮಾನದಂಡಗಳನ್ನು ಪಾಲಿಸಿ ಕಾನೂನು ತಯಾರಿಸಿದ್ದರಿಂದ ಯಾರನ್ನೂ ಪೌರತ್ವದಿಂದ ಹೊರಗೆ ಹಾಕಲು ಸಾಧ್ಯವಿಲ್ಲ ಎಂದು ಸರಕಾರ ಹೇಳುತ್ತಿದೆ. ಆದರೆ ವಿಶ್ವಸಂಸ್ಥೆ, ಅಮೆರಿಕ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಕಮಿಶನ್ ಮತ್ತು ಹಲವಾರು ಮಾನವಹಕ್ಕು ಸಂಘಟನೆಗಳು ಇದರಲ್ಲಿ ಆತಂಕ ವ್ಯಕ್ತಪಡಿಸಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಇದರ ವಿರುದ್ಧ ಪ್ರತಿಭಟನೆಗಳು ನಡೆದಿರುವುದನ್ನು ವರದಿ ಎತ್ತಿ ತೋರಿಸಿದೆ.

ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಷಯಗಳನ್ನು ಅಭ್ಯಸಿಸಿ ವರದಿ ತಯಾರಿಸುವ ಅಮೆರಿಕ ಕಾಂಗ್ರೆಸ್ ಅಧೀನದ ಸಮಿತಿ ಸಿಆರ್‍ಎಸ್ ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲನೆ ಬಾರಿ ಪೌರತ್ವವನ್ನು ಧರ್ಮದ ಮಾನದಂಡದಲ್ಲಿ ನೋಡಲಾಗುತ್ತಿದೆ ಎಂದು ಹೇಳಿದೆ. ಡಿಸೆಂಬರ್ ಹನ್ನೊಂದಕ್ಕೆ ಪಾರ್ಲಿಮೆಂಟ್ ಅಂಗೀಕಾರ ನೀಡಿದ ಪೌರತ್ವ ತಿದ್ದುಪಡಿ ಕಾನೂನು ಪ್ರಕಾರ ಪಾಕಿಸ್ತಾನ, ಅಫ್ಘಾನಿಸಾನ, ಬಾಂಗ್ಲಾದೇಶದ ಮುಸ್ಲಿಮಲ್ಲದವರಿಗೆ ಪೌರತ್ವ ನೀಡಲಿದೆ.