ಭಾತೀಯರೆಲ್ಲ ಹಿಂದೂಗಳು ಎಂಬ ಹೇಳಿಕೆ ಸರಿಯಲ್ಲ- ಕೇಂದ್ರ ಸಚಿವ ಅಠಾವಳೆ

0
920

ಸನ್ಮಾರ್ಗ ವಾರ್ತೆ-

ಹೊಸದಿಲ್ಲಿ, ಡಿ. 28: ಭಾರತದ 130 ಕೋಟಿ ಜನರು ಹಿಂದೂಗಳೆನ್ನುವ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್‍ರ ಹೇಳಿಕೆಯನ್ನು ಕೇಂದ್ರ ಸಾಮಾಜಿಕ ನ್ಯಾಯ ಸಹಾಯಕ ಸಚಿವ ರಾಮದಾಸ್ ಅಠಾವಳೆ ತಿರಸ್ಕರಿಸಿದ್ದು ಭಾರತದಲ್ಲಿ ಇರುವವರೆಲ್ಲ ಹಿಂದೂಗಳೆನ್ನುವುದು ಸರಿಯಲ್ಲ. ವಿವಿಧ ವಿಭಾಗಗಳು ಜತೆಗೂಡಿ ವಾಸಿಸುವ ದೇಶ ಇದು ಎಂದು ಸಚಿವರು ಹೇಳಿದರು.

ಭಾರತದ ಎಲ್ಲ ಜನರು ಬುದ್ಧ ಧರ್ಮದ ಅನುಯಾಯಿಗಳಾಗಿದ್ದ ಒಂದು ಕಾಲ ಇತ್ತು. ಎಲ್ಲ ಧರ್ಮದವರು ಭಾರತೀಯರು ಎಂದು ಮೋಹನ್ ಭಾಗವತ್ ಹೇಳಿದ್ದರೆ ಒಪ್ಪಬಹುದಾಗಿತ್ತು. ಹಿಂದೂ, ಸಿಖ್ ಬುದ್ಧ, ಕ್ರೈಸ್ತ, ಪಾರ್ಸಿ, ಜೈನ್ ಲಿಂಗಾಯತ ಮೊದಲಾದ ವಿಭಾಗಗಳು ಭಾರತದಲ್ಲಿವೆ ಎಂದು ರಾಮ್‍ದಾಸ್ ಹೇಳಿದರು. ಅವರ ರಿಪಬ್ಲಿಕ್ ಪಾರ್ಟಿ ಎನ್‍ಡಿಯ ಸಖ್ಯಪಕ್ಷವಾಗಿದೆ.

ಕಳೆದ ದಿವಸ ಹೈದರಾಬಾದಿನಲ್ಲಿ ನಡೆದ ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಮೋಹನ್ ಭಾಗವತ್ ಈ ಹೇಳಿಕೆ ನೀಡಿದ್ದರು. ಭಾರತದ ಮಕ್ಕಳೆಲ್ಲರೂ ಹಿಂದೂಗಳು. ಯಾವ ಭಾಷೆ ಆಡಿದರೂ, ಯಾವ ಪ್ರದೇಶದಿಂದಾದರೂ, ಯಾವ ನಂಬಿಕೆ ಇರುವವರಾದರೂ ವಿಶ್ವಾಸ ಇಲ್ಲದವರಾದರೂ ಅವರೆಲ್ಲರೂ ಹಿಂದೂಗಳೆ ಎಂದು ಭಾಗವತ್ ಹೇಳಿದ್ದರು.