ಸನ್ಮಾರ್ಗ ವಾರ್ತೆ-
ಪಾಟ್ನ, ಜ.1: ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಮೀರತ್ ಎಸ್ಪಿ ಅಖಿಲೇಶ್ ನಾರಾಯಣ್ ಸಿಂಗ್‍ರನ್ನು ಬೆಂಬಲಿಸಿದ್ದಾರೆ ಮತ್ತು ಭಾರತದಲ್ಲಿದ್ದು ಪಾಕಿಸ್ತಾನ್ ಝಿಂದಾಬಾದ್ ಎಂದರೆ ಸಹಿಸಲಾಗದು ಎಂದು ಹೇಳಿದ್ದಾರೆ. ಪೊಲೀಸ್ ಅಧಿಕಾರಿ ಮಾಡಿದ್ದು ಸರಿಯಾಗಿದೆ ಎಂದು ಅವರು ಹೇಳಿದರು. ಮೀರತ್ ಎಸ್ಪಿಯವರು ಪೌರತ್ವ ತಿದ್ದುಪಡಿ ಕಾನೂನು ಪ್ರತಿಭಟನೆ ಸಂದರ್ಭದಲ್ಲಿ ಕೆಲವರನ್ನು ಪಾಕಿಸ್ತಾನಕ್ಕೆ ಹೋಗಲು ಹೇಳಿದ್ದರು. ಇದನ್ನು ಗಿರಿರಾಜ್ ಸಿಂಗ್ ಸಮರ್ಥಿಸಿಕೊಂಡರು.
ಇದಕ್ಕಿಂತ ಮೊದಲು ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಕ್ವಿಯವರು, ಶಾಂತಿ ಸ್ಥಾಪನೆಗೆ ಆದ್ಯತೆ ಕೊಡಬೇಕು. ಪ್ರಚೋದಕ ಮಾತು ಆಡಬಾರದು ಎಂದು ಹೇಳಿದ್ದರು. ಎಸ್ಪಿಯವರೇ, ನೀವು ಪ್ರತಿಭಟನಾರ್ಥ ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡಿದ್ದೀರಿ. ನಿಮ್ಮ ಜೀವನವೂ ಕಪ್ಪು ಆಗಿಬಿಡಲಿದೆ ಎಂದು ಹೆದರಿಸಿದ್ದರು.












