ಹೊಸ ವರ್ಷದ ಆಘಾತ: ಅಡಿಗೆ ಅನಿಲಕ್ಕೆ 19 ರೂ. ಹೆಚ್ಚಳ

0
701

ಸನ್ಮಾರ್ಗ ವಾರ್ತೆ-
ಹೊಸದಿಲ್ಲಿ, ಜ. 1: ಸಬ್ಸಿಡಿ ರಹಿತ ಅಡಿಗೆ ಅನಿಲದ ದರದಲ್ಲಿ ಹೆಚ್ಚಳವಾಗಿದೆ. ಸಿಲಿಂಡರಿಗೆ ಹತ್ತೊಂಬತ್ತು ರೂಪಾಯಿ ಹೆಚ್ಚಿಸಲಾಗಿದ್ದು ನಿರಂತರ ಐದನೆ ತಿಂಗಳು ಅಡಿಗೆ ಅನಿಲದ ದರದಲ್ಲಿ ಹೆಚ್ಚಳವಾಗಿದೆ. ಆಗಸ್ಟ್ ತಿಂಗಳ ನಂತರ 140 ರೂಪಾಯಿ ಹೆಚ್ಚಳವಾಗಿದೆ. ಹೊಸ ದರದ ಪ್ರಕಾರ ಭಾರತ ಆಯಿಲ್ ಕಾರ್ಪೊರೇಷನ್‍ನ ಇಂಡಿಯನ್ ಎಲ್‍ಪಿಜಿ ಸಿಲಿಂಡರ್ ದಿಲ್ಲಿಯಲ್ಲಿ 714 ರೂಪಾಯಿಯಾಗಿದೆ. ಮುಂಬೈಯಲ್ಲಿ 684.5 ರೂಪಾಯಿ ದರವಾಗಿದೆ.

ಅಡಿಗೆ ಅನಿಲದ ತೆರಿಗೆಯಲ್ಲಿ ಪ್ರತಿ ತಿಂಗಳು ಕೇಂದ್ರ ಸರಕಾರ ವ್ಯತ್ಯಾಸ ಮಾಡುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲ್‍ಪಿಜಿ ದರ, ವಿದೇಶ ವಿನಿಮಯದ ದರ ಪ್ರಕಾರ ಅಡಿಗೆ ಅನಿಲ ದರದಲ್ಲಿ ಬದಲಾವಣೆಯನ್ನು ಮಾಡಲಾಗುತ್ತಿದೆ.