ವೋ ತೋಡೇಂಗೆ, ಹಮ್ ಜೋಡೇಂಗೆ: ದೆಹಲಿಯ ಶಹೀನ್ ಬಾಗ್ ನಲ್ಲಿ ನಿರಂತರ ಎರಡು ವಾರಗಳಿಂದ ನಡೆಯುತ್ತಿರುವ ಪ್ರತಿಭಟನೆಯ ಝಲಕ್

0
1085

ಸನ್ಮಾರ್ಗ ವಾರ್ತೆ-
ನವದೆಹಲಿ: ವರ್ಷದ ಕೊನೆಯ ದಿನದಂದು ಸಿಎಎ ವಿರೋಧಿ ಪ್ರತಿಭಟನಾಕಾರರು, ವಿದ್ಯಾರ್ಥಿಗಳು ಮತ್ತು ಕಾರ್ಯಕರ್ತರು ದೆಹಲಿಯ ಕೊನಾಟ್ ಪ್ಲೇಸ್, ಶಾಹೀನ್ ಬಾಗ್ ಮತ್ತು ಸಾಕೆತ್ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಪ್ರತಿಭಟನೆಗಳನ್ನು ನಡೆಸಿದರು ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರದ್ದುಪಡಿಸಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದರು.

ಎರಡು ವಾರಗಳಿಂದ ನಿರಂತರ ಪ್ರತಿಭಟನೆ ನಡೆಯುತ್ತಿರುವ ದೆಹಲಿಯ ಶಾಹೀನ್ ಬಾಗ್ ನಲ್ಲಿ ಮಹಿಳೆಯರು ಮತ್ತು ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸುಮಾರು ಎರಡು ಮೂರು ಸಾವಿರ ಜನರು ಜಮಾಯಿಸಿದರು. ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧದ ಶಾಂತಿಯುತ ಪ್ರತಿಭಟನೆ ಯಲ್ಲಿ ಜನರು ತಮ್ಮ ಕೈಯಲ್ಲಿ ಪೋಸ್ಟರ್, ಫಲಕಗಳು ಮತ್ತು ತ್ರಿವರ್ಣ ಧ್ವಜವನ್ನು ಹಿಡಿದಿದ್ದರು.

“ಹೊಸ ವರ್ಷದಲ್ಲಿ ಏನಾದರೂ ಒಳ್ಳೆಯದು ಸಂಭವಿಸುತ್ತದೆ ಎಂಬ ಭರವಸೆಯಲ್ಲಿ ನಾನು ಬಂದಿದ್ದೇನೆ. ಜಾಮಿಯಾ ಮತ್ತು ಎಎಂಯು ನಂತರ, ನೀವು ಭರವಸೆಯನ್ನು ಪುನರುಜ್ಜೀವನಗೊಳಿಸಬೇಕಾದರೆ ಶಹೀನ್ ಬಾಗ್‌ಗೆ ಹೋಗು ಎಂದು ನನಗೆ ತಿಳಿಸಲಾಯಿತು” ಎಂದು ಸ್ವರಾಜ್ ಭಾರತದ ಯೋಗೇಂದ್ರ ಯಾದವ್ ಹೇಳಿದ್ದಾರೆ. ಗೀತರಚನೆಕಾರ ಸಾಹಿರ್ ಲುಧಿಯಾನ್ವಿ ಅವರ “ಜಿನ್ಹೆ ನಾಜ್ ಹೈ ಹಿಂದ್ ಪರ್ ವೋ ಕಹಾನ್ ಹೈನ್” ಎಂಬ ಸಾಲನ್ನು ಉಲ್ಲೇಖಿಸಿದರು. ಪೌರತ್ವ ಕಾನೂನನ್ನು ವಿರೋಧಿಸಲು ದೇಶದ ಇತರ ಭಾಗಗಳಲ್ಲಿ ಇದೇ ರೀತಿಯ ಪ್ರದರ್ಶನಗಳನ್ನು ನಡೆಸಲಾಗುವುದು ಎಂದು ಅವರು ಪ್ರತಿಭಟನಾಕಾರರಿಗೆ ತಿಳಿಸಿದರು.

“ವೋ ಟೋಡೆಂಗೆ, ಹಮ್ ಜೋಡೆಂಗೆ (ಅಧಿಕಾರದಲ್ಲಿರುವವರು ದೇಶವನ್ನು ಒಡೆಯುತ್ತಾರೆ, ಆದರೆ ನಾವು, ಅದನ್ನು ಒಂದುಗೂಡಿಸುತ್ತೇವೆ)” ಎಂದು ಅವರು ಹೇಳಿದರು, ದಕ್ಷಿಣ ದೆಹಲಿಯ ಪಿವಿಆರ್ ಅನುಪಮ್ ಚಿತ್ರಮಂದಿರದ ಹೊರಗೆ, ಕಾರ್ಯಕರ್ತ ಶಬ್ನಮ್ ಹಶ್ಮಿ ಮತ್ತು ವಕೀಲ ವೃಂದಾ ಗ್ರೋವರ್ ಸೇರಿದಂತೆ ಸುಮಾರು 50 ಪ್ರತಿಭಟನಾಕಾರರು ಸಿಎಎ ವಿರುದ್ಧ ಘೋಷಣೆಗಳನ್ನು ಎತ್ತಿದರು. ಗ್ರೋವರ್ ಅವರು ಮಾತಾಡಿ, “ನಾವು ಈ ಸ್ಥಳವನ್ನು (ಪಿವಿಆರ್ ಅನುಪಮ್) ಆಯ್ಕೆ ಮಾಡಿದ್ದೇವೆ. ಏಕೆಂದರೆ ನಾವು ನಮ್ಮ ಪ್ರತಿಭಟನೆಯನ್ನು ನಗರದ ಪ್ರತಿಯೊಂದು ಭಾಗಕ್ಕೂ ಕೊಂಡೊಯ್ಯಲು ಬಯಸುತ್ತೇವೆ. ಇಂದು ಹಲವಾರು ಟ್ಯಾಕ್ಸಿ ಚಾಲಕರು ನಮ್ಮೊಂದಿಗೆ ಸೇರಿಕೊಂಡು ನಮಗೆ ಬೆಂಬಲ ನೀಡಿದರು” ಎಂದು ಹೇಳಿದರು.

ಸಾಮಾಜಿಕ ಕಾರ್ಯಕರ್ತ ಹಶ್ಮಿಯವರು ಮಾತಾಡಿ, “ಮೌನವಾಗಿ ಮತ್ತು ಕಲಾತ್ಮಕವಾಗಿ ಪ್ರತಿಭಟಿಸುವುದು ಇದರ ಉದ್ದೇಶವಾಗಿತ್ತು. ನಾವು ಹಾಡುಗಳನ್ನು ಹಾಡಲು ಮತ್ತು ಎನ್‌ಆರ್‌ಸಿ ಮತ್ತು ಸಿಎಎ ಕುರಿತು ಪ್ರಮುಖ ಅಂಶಗಳನ್ನು ಓದುವಂತೆ ಪ್ರೋತ್ಸಾಹಿಸಿದ್ದೇವೆ. ಎಲ್ಲರಿಗೂ ಅದರ ಪರಿಣಾಮವನ್ನು ನಾವು ವಿವರಿಸಿದ್ದೇವೆ ಮತ್ತು ಕರಪತ್ರಗಳನ್ನು ವಿತರಿಸಿದ್ದೇವೆ” ಎಂದು ಹೇಳಿದರು.

ಕೊನಾಟ್ ಪ್ಲೇಸ್‌ನ ಸೆಂಟ್ರಲ್ ಪಾರ್ಕ್‌ನಲ್ಲಿ, ಡಿಪಿಸಿಸಿ ಮುಖ್ಯಸ್ಥ ಸುಭಾಷ್ ಚೋಪ್ರಾ ನೇತೃತ್ವದ ದೆಹಲಿ ಕಾಂಗ್ರೆಸ್ ಕಾರ್ಯಕರ್ತರು ಸಾಂಕೇತಿಕ ಉಪವಾಸ ಸತ್ಯಾಗ್ರಹ ಮಾಡಲು ಪ್ರಯತ್ನಿಸಿದರು. ಆದರೆ, ಅವರನ್ನು ಬಂಧಿಸಿ ಮಂದಿರ ಮಾರ್ಗ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.