ಕಾನ್ಸ್ ಟೇಬಲ್‍ಗೆ ಮೂತ್ರ ಕುಡಿಸಿ ಚಿನ್ನ, ಹಣ ದರೋಡೆ; ಬಿಜೆಪಿ ಶಾಸಕನ ವಿರುದ್ಧ ಕೇಸು

0
875

ಸನ್ಮಾರ್ಗ ವಾರ್ತೆ-

ಲಕ್ನೊ, ಜ. 1: ಪೊಲೀಸ್ ಕಾನ್ಸಟೇಬಲ್‍ಗೆ ಹೊಡೆದು ಮೂತ್ರ ಕುಡಿಸಿ ಚಿನ್ನ, ಹಣವನ್ನು ದೋಚಿದ ಘಟನೆಯಲ್ಲಿ ಉತ್ತರ ಪ್ರದೇಶ ಬಿಜೆಪಿ ಶಾಸಕ ಕಿಶನ್ ಲಾಲ್ ರಾಜಪೂತ್ ವಿರುದ್ಧ ಕೇಸು ದಾಖಲಾಗಿದೆ. ಕಿಶನ್ ಅವರ ಮಾವ ಮತ್ತು ಐವತ್ತು ಮಂದಿಯ ವಿರುದ್ಧ ಕೇಸು ದಾಖಲಾಗಿದ್ದು ಕಾನ್ಸ್ ಟೇಬಲ್ ಮೋಹಿತ್ ಗುರ್ಜರ್ ಗೆ ಹಲ್ಲೆ ನಡೆಸಿ ಮೂತ್ರ ಕುಡಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಬೈಕ್ ಖರೀದಿಗೆ ಸಂಬಂಧಿಸಿ ರಾಹುಲ್ ಎಂಬ ವಾಹನ ಮಾರಾಟಗಾರನೊಂದಿಗೆ ಕಾನ್ಸ್ ಟೇಬಲ್ ಗೆ ಮೊದಲೇ ವಿವಾದವಿತ್ತು. ಮಾರಿದವನ ಎಡವಟ್ಟಿನಿಂದ ಬೈಕ್ ನೋಂದಾಯಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಬೈಕನ್ನು ವಾಪಸು ಕೊಟ್ಟು ಹಣ ನೀಡುವಂತೆ ಕಾನ್ಸ್ ಟೇಬಲ್ ಕೇಳಿದ್ದರು. ಹಣ ಕೊಡುವೆ ಎಂದು ವಾಹನ ಮಾರಿದವನನ್ನು ಕರೆಯಿಸಿಕೊಂಡರು. ರಾಹುಲ್ ಮತ್ತು ಶಾಸಕ ಕಿಶನ್ ಲಾಲ್ ರಾಜಪೂತ್ ಮತ್ತು ಮಾವ ಋಷಭ್ ತಂಡ ಅಲ್ಲಿತ್ತು. ನಂತರ ಕಾನ್ಸಟೇಬಲ್‍ನನ್ನು ನಿಂದಿಸಿ ಕ್ರೂರವಾಗಿ ಹೊಡೆದರು. ಗುಂಡು ಹಾರಿಸಿದರೂ ಅದೃಷ್ಟವಶಾತ್ ಅದು ತಾಗಿಲ್ಲ. ತನ್ನ ಚಿನ್ನದ ಸರ ಮತ್ತು ಪರ್ಸ್‍ನ್ನು ಶಾಸಕ ಮತ್ತು ತಂಡ ಕಿತ್ತುಕೊಂಡಿದ್ದಾರೆ. ಶೂನಿಂದ ಶಾಸಕ ಹೊಡೆದಿದ್ದಾರೆ. ಸಹಾಯಕರಲ್ಲಿ ಮೂತ್ರ ಕುಡಿಸುವಂತೆ ಶಾಸಕ ಹೇಳಿದರು. ಅಲ್ಲಿದ್ದ ಪೊಲೀಸರು ಇದನ್ನೆಲ್ಲ ನೋಡುತ್ತ ನಿಂತಿದ್ದರು ಎಂದು ಕಾನ್ಸಟೇಬಲ್ ಮೋಹಿತ್ ಹೇಳಿದರು.

ಘಟನೆಯ ಕುರಿತು ಕಾನ್ಸಟೇಬಲ್ ಮೋಹಿತ್ ದೂರು ನೀಡಿದರೂ ಕ್ರಮ ಜರಗಿಸಲಿಲ್ಲ. ನಂತರ ಕೋರ್ಟಿನ ಮೊರೆ ಹೋಗಿದ್ದಾರೆ. ಕೋರ್ಟು ಮಧ್ಯಪ್ರವೇಶಿಸಿದ ಬಳಿಕ ಕೇಸು ದಾಖಲಿಸಲಾಗಿತ್ತು. ಆರೋಪಿ ಕಿಶನ್ ಲಾಲ್ ಉತ್ತರ ಪ್ರದೇಶದ ಬರ್‍ಕೇರ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ.