ಧಾರ್ಮಿಕ ಸದ್ಭಾವನೆಗೆ ಉದಾಹರಣೆಯಾಗಿ ಸುದ್ದಿಯಲ್ಲಿರುವ ಮಸೀದಿ ಮತ್ತು ಗುರುದ್ವಾರ

0
510

ಸನ್ಮಾರ್ಗ ವಾರ್ತೆ-

ಪಂಜಾಬ್, ಜ. 1: ಫತೇಹಗಡ ಸಾಹಿಬ್‍ನ ಗ್ರಾಮ ಮಹಾದಿಯಾಂ ಪ್ರದೇಶವು ಧಾರ್ಮಿಕ ಸದ್ಭಾವನೆಗೆ ಅಪೂರ್ವ ಉದಾಹರಣೆಯಾಗಿದೆ. ಇಲ್ಲಿನ ಒಂದೇ ಕಾಂಪ್ಲೆಕ್ಸ್ ನಲ್ಲಿ ಮಸಾತಗಡ ಸಾಹಿಬ್ ಗುರುದ್ವಾರ ಇದೆ ಮತ್ತು 300 ವರ್ಷಗಳ ಹಳೆಯ ಬಿಳಿ ಚಿತಯಾಂ ಮಸೀದಿ ಕೂಡ ಇದೆ. ಮಸೀದಿಗೆ ಬರುವ ಜನರು ನಮಾಝ್ ಮಾಡುತ್ತಾರೆ. ನಂತರ ಗುರದ್ವಾರಕ್ಕೂ ಹೋಗುತ್ತಾರೆ. ಇನ್ನೊಂದೆಡೆ ಗುರುದ್ವಾಕ್ಕೆ ಭಕ್ತರು ಬರುತ್ತಾರೆ. ಮಸೀದಿಗೂ ಹೋಗುತ್ತಾರೆ. ಸಿಖ್ ಧಾರ್ಮಿಕ ನಾಯಕ ಅರ್ಜುನ್ ಸಿಂಗ್ ಸೋಧಿಯವರು ಮಸೀದಿಯ ಒಳಗೆ ಶ್ರೀ ಗುರುಗ್ರಂಥ ಸಾಹಿಬ್ ಪ್ರಕಾಶನ ಮಾಡಿ ಖಾಲಿ ಬಿಟ್ಟಿದ್ದರು. ಮಸೀದಿಯಲ್ಲಿ ಗುರುಗ್ರಂಥ ಸಾಹಿಬ್ 21ನೇ ಶತಮಾನದವರೆಗೂ ಇತ್ತು. ನಂತರ ಅಲ್ಲಿ ಕೋಣೆ ಕಟ್ಟಲಾಯಿತು.

ಮಸೀದಿಯ ಸ್ವಚ್ಛತೆ, ರಿಪೇರಿ ಎಲ್ಲ ಕೆಲಸವನ್ನು ಸಿಖ್ ಪ್ರಮುಖ್ ಜೀತ್ ಸಿಂಗ್ ನಿರ್ವಹಿಸುತ್ತಾರೆ. ಮತ್ತು ಜನರು ಅವರಿಗೆ ನೆರವು ನೀಡುತ್ತಾರೆ.