ನಾವು ರಾಜಕೀಯದಿಂದ ತುಂಬಾ ದೂರ: ಜನರಲ್ ಬಿಪಿನ್ ರಾವತ್

0
816

ಸನ್ಮಾರ್ಗ ವಾರ್ತೆ-

ಹೊಸದಿಲ್ಲಿ, ಜ.1: ದೇಶದ ಮೊದಲ ರಕ್ಷಣಾ ಮುಖ್ಯಸ್ಥರಾಗಿ ಜನರಲ್ ಬಿಪಿನ್ ರಾವತ್ ಬುಧವಾರ ಅಧಿಕಾರ ವಹಿಸಿಕೊಂಡಿದ್ದು ಅದಕ್ಕಿಂತ ಮೊದಲು ಜನರಲ್ ರಾವತ್ ಗಾರ್ಡ್ ಆಫ್ ಹೋನರ್ ಸ್ವೀಕರಿಸಿದ್ದರು. ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಬಂದ ಅವರು ಆದರಾಂಜಲಿ ಅರ್ಪಿಸಿದರು. ಮೂರು ಸೇನೆಯ ಏಕೀಕರಣದೊಂದಿಗೆ ಪ್ರವರ್ತಿಸಲು ನಾವು ಒಂದು ತಂಡದಂತೆ ಕೆಲಸ ಮಾಡುತ್ತೇವೆ ಎಂದು ಜನರಲ್ ರಾವತ್ ಅಧಿಕಾರ ವಹಿಸಿಕೊಂಡ ಬಳಿಕ ಹೇಳಿದರು.

ನಾವು ರಾಜಕೀಯದಿಂದ ತುಂಬ ದೂರವಿದ್ದೇವೆ. ಅಧಿಕಾರದಲ್ಲಿ ಕುಳಿತ ಸರಕಾರದ ನಿರ್ದೇಶದಂತೆ ನಾವು ಕೆಲಸ ಮಾಡುತ್ತೇವೆ ಎಂದು ಸಶಸ್ತ್ರ ಸೇನೆಯನ್ನು ರಾಜಕೀಕರಣಗೊಳಿಸಲಾಗುತ್ತಿದೆ ಎಂಬ ಆರೋಪದ ಕುರಿತು ಪ್ರಶ್ನಿಸಿದಾಗ ರಾವತ್ ಹೇಳಿದರು. ರಕ್ಷಣಾ ಸಚಿವರ ಪ್ರಧಾನ ಸೈನಿಕ ಸಲಹೆಗಾರನಾಗಿ ಇವರು ಕೆಲಸ ಮಾಡಲಿದ್ದಾರೆ.