ಲಾಭದ ರಾಜಕೀಯ ಮಾಡುವವರು ಭಾರತ ಜಾತ್ಯತೀತ ದೇಶ ಎಂಬುದನ್ನು ನೆನಪಿಟ್ಟುಕೊಳ್ಳಬೇಕು- ಮಾಯಾವತಿ

0
646

ಸನ್ಮಾರ್ಗ ವಾರ್ತೆ-

ಲಕ್ನೊ, ಜ.1: ಪೌರತ್ವ ತಿದ್ದುಪಡಿ ಕಾನೂನನ್ನು ಕೆಲವು ಪಾರ್ಟಿಗಳು ರಾಜಕೀಯ ಲಾಭಕ್ಕೆ ಉಪಯೋಗಿಸುತ್ತಿವೆ ಎಂದು ಬಿಎಸ್‍ಪಿ ಅಧ್ಯಕ್ಷೆ ಮಾಯಾವತಿ ಹೇಳಿದ್ದಾರೆ. ಭಾರತ ಜಾತ್ಯತೀತ ದೇಶ ಎನ್ನುವುದು ಅವರಿಗೆ ನೆನಪಿರಲಿ. ದೇಶದಲ್ಲಿ ಶಾಂತಿ ಒಗ್ಗಟ್ಟನ್ನು ಉಳಿಸಿಕೊಳ್ಳಬೇಕೆಂದು ಅವರು ಹೇಳಿದರು.

ತಮ್ಮ ಲಾಭಕ್ಕಾಗಿ ರಾಜಕೀಯ ಮಾಡುವವರು ಭಾರತವನ್ನು ಜಾತ್ಯತೀತ ದೇಶ ಎನ್ನುವುದನ್ನು ಮರೆಯಬಾರದು. ಎಲ್ಲ ಧರ್ಮದವರನ್ನು ಇಲ್ಲಿ ಗೌರವಿಸಬೇಕು. ದೇಶದ ಶಾಂತಿ ಒಗ್ಗಟ್ಟು ಉಳಿಯಬೇಕು ಎಂದರು. ಅವರು ಹೊಸವರ್ಷದ ಶುಭಾಶಯಗಳನ್ನು ಕೋರಿ ಮಾತಾಡುತ್ತಿದ್ದರು. 2019 ಭಿನ್ನಮತದ ವರ್ಷ ಆಗಿತ್ತು. ಕೋಮು ವಿಚಾರದ ಬಿಜೆಪಿ ಮತ್ತು ಕೇಂದ್ರ ಸರಕಾರ ಭಾರತದ ಸಂವಿಧಾನ ತತ್ವಗಳನ್ನು ದುರ್ಬಲಗೊಳಿಸಿದ ವರ್ಷ ಗತಿಸಿದೆ ಎಂದು ಮಾಯವತಿ ಟೀಕಿಸಿದರು.