ಸನ್ಮಾರ್ಗ ವಾರ್ತೆ-
ಬಾಂಗ್ಲದೇಶಿಯರು ಭಾರತೀಯರಿಗಿಂತ ಭಿನ್ನರಲ್ಲ. ಹೆಚ್ಚು ಹೋಲಿಕೆಗಳಿವೆ. ಆದರೆ ಇಂದು ಬಾಂಗ್ಲದೇಶಿಯರು ಅವರ ಹಿಂದುತ್ವದ ಬೇರುಗಳನ್ನು ಮರೆಯಲು ಯತ್ನಿಸುತ್ತಿದ್ದಾರೆ ಎಂದು ಶರ್ಬಾರಿ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದು ಬಾಂಗ್ಲಾದೇಶದ ಇಸ್ಲಾಂ ಧರ್ಮ ತನ್ನ ಮೊದಲ ಕಾದಂಬರಿ ಹಿಟ್ ಅಂಡರ್ ಹರ್ಫಿಟ್ಗೆ ಪ್ರೇರಣೆಯಾಗಿದೆ. 1940ರ ಕೊಲ್ಕತಾವನ್ನು ಆಧಾರವಾಗಿಟ್ಟು ಅದನ್ನು ಬರೆದಿದ್ದೇನೆ. ಅಂದಿನ ಬ್ರಿಟಿಷ್ ವಸಾಹತುಶಾಹೀಕರಣ, ಕೋಮುವಾದವನ್ನು ಕಾದಂಬರಿಯಲ್ಲಿ ಚಿತ್ರಿಸಿರುವೆನು. 1946ರಲ್ಲಿ ಕೊಲ್ಕತಾದಲ್ಲಿ ನಡೆದ ಕೋಮು ಗಲಭೆಯ ಪ್ರತ್ಯಕ್ಷ ದರ್ಶಿಯಾಗಿ ಜೀವಿಸಿದ ವ್ಯಕ್ತಿ ತನ್ನ ತಾಯಿ ಎಂದು ಶರ್ಬಾರಿ ಹೇಳಿದರು. ಢಾಕದಲ್ಲಿ ಜನಿಸಿ ಬೆಳೆದ ಶರ್ಬಾರಿ ಬಳಿಕ ಜೀವ ಬೆದರಿಕೆಯಿಂದಾಗಿ ಅಮೆರಿಕಕ್ಕೆ ವಲಸೆ ಹೋಗಿದ್ದರು.












