ಮಕ್ಕಳನ್ನು ಮಿಷನರಿ ಸ್ಕೂಲ್ ಗೆ ಕಳುಹಿಸುತ್ತೀರಿ, ಅವರು ವಿದೇಶಕ್ಕೆ ತೆರಳಿ ಗೋಮಾಂಸ ಸೇವಿಸುತ್ತಾರೆ: ಕೇಂದ್ರ ಸಚಿವರ ವಿವಾದಾತ್ಮಕ ಹೇಳಿಕೆ

0
1054

ಸನ್ಮಾರ್ಗ ವಾರ್ತೆ-

ದೆಹಲಿ; ಜ.2- ನಮ್ಮ ‘ಸಂಸ್ಕೃತಿ’ ಮತ್ತು ‘ಸಾಂಪ್ರದಾಯಿಕ ಮೌಲ್ಯಗಳ’ ಬಗ್ಗೆ ಕಲಿಸದೇ ಇದ್ದುದರಿಂದಲೇ ವಿದೇಶಕ್ಕೆ ಹೋಗುವ ಭಾರತೀಯ ಮಕ್ಕಳಲ್ಲಿ ಹೆಚ್ಚಿನವರು ಗೋಮಾಂಸ ತಿನ್ನಲು ಪ್ರಾರಂಭಿಸುತ್ತಾರೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

“ಭಗವದ್ಗೀತೆಯನ್ನು ಶಾಲೆಗಳಲ್ಲಿ ಕಲಿಸಬೇಕು, ನಾವು ನಮ್ಮ ಮಕ್ಕಳನ್ನು ಮಿಷನರಿ ಶಾಲೆಗಳಿಗೆ ಕಳುಹಿಸುತ್ತೇವೆ, ಅವರು ಐಐಟಿಗೆ ಹೋಗುತ್ತಾರೆ. ಎಂಜಿನಿಯರ್‌ಗಳಾಗುತ್ತಾರೆ, ವಿದೇಶಕ್ಕೆ ಹೋಗುತ್ತಾರೆ ಮತ್ತು ಅವರಲ್ಲಿ ಹೆಚ್ಚಿನವರು ಗೋಮಾಂಸ ತಿನ್ನಲು ಪ್ರಾರಂಭಿಸುತ್ತಾರೆ. ಏಕೆ? ಯಾಕೆಂದರೆ ನಾವು ನಮ್ಮ ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಮೌಲ್ಯಗಳ ಬಗ್ಗೆ ಅವರಿಗೆ ಕಲಿಸಲಿಲ್ಲ. ನಂತರ, ಪೋಷಕರು ತಮ್ಮ ಮಕ್ಕಳು ತಮ್ಮನ್ನು ನೋಡಿಕೊಳ್ಳುತ್ತಿಲ್ಲ ಎಂದು ದೂರುತ್ತಾರೆ ಎಂದು ಅವರು ಹೇಳಿದ್ದಾರೆ. ಅವರು ಇಲ್ಲಿ ನಡೆದ ‘ಶ್ರೀಮದ್ ಭಗವತ್ ಕಥಾ ಜ್ಞಾನಾಪನ್’ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.