ಮುಝಪ್ಫರ್ ನಗರದ ಪೊಲೀಸ್ ದೌರ್ಜನ್ಯ ಕಿರಾತಕವಾದುದು- ಪ್ರಿಯಾಂಕಾ ಗಾಂಧಿ

0
836

ಸನ್ಮಾರ್ಗ ವಾರ್ತೆ-
ಲಕ್ನೊ ,ಜ. 4: ಉತ್ತರ ಪ್ರದೇಶದ ಮುಝಪ್ಫರ್ ನಗರದ ಪೊಲೀಸ್ ದೌರ್ಜನ್ಯಕ್ಕೊಳಗಾದವರ ಮನೆಗೆ ಭೇಟಿ ನೀಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ,ಪೊಲೀಸರು ಕ್ರೂರ ದೌರ್ಜನ್ಯವನ್ನು ಎಸಗಿದ್ದಾರೆ ಎಂದು ಹೇಳಿದ್ದಾರೆ. ಪೊಲೀಸರು ಕ್ರೂರವಾಗಿ ಥಳಿಸಿದ ಮೌಲಾನಾ ಆಬಿದ್ ಹುಸೈನ್ ಮತ್ತು ಮದ್ರಸ ವಿದ್ಯಾರ್ಥಿಗಳನ್ನು ಹಾಗೂ ದರೋಡೆಗೊಳಗಾದವರ ಮನೆಗೆ ಪ್ರಿಯಾಂಕಾ ಗಾಂಧಿ ಭೇಟಿ ನೀಡಿದ್ದಾರೆ. .

ಮೌಲಾನಾ ಆಬಿದ್ ಹುಸೈನ್‍ರ ಮದ್ರಸದೊಳಗಿದ್ದ ವಿದ್ಯಾಥಿಗಳನ್ನು ಬಲವಂತದಿಂದ ಹಿಡಿದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿದರು ಎಂಬ ವರದಿ ಬಹಿರಂಗವಾಗಿತ್ತು. ಪೊಲೀಸ್ ದೌರ್ಜನ್ಯದಲ್ಲಿ ವಿದ್ಯಾರ್ಥಿಗಳು ಮಾರಕವಾಗಿ ಗಾಯಗೊಂಡಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.

ಕಸ್ಟಡಿಗೆ ಪಡೆದ ಕೆಲವರನ್ನು ಮಾತ್ರ ಬಿಡುಗಡೆಗೊಳಿಸಲಾಗಿದೆ. ಉಳಿದವರು ಈಗಲೂ ಪೊಲೀಸ್ ವಶದಲ್ಲಿದ್ದಾರೆ. ಏಳು ತಿಂಗಳ ಗರ್ಭಿಣಿ ಮತ್ತು 22 ವರ್ಷದ ಯುವತಿಯನ್ನು ಪೊಲೀಸರು ಕ್ರೂರವಾಗಿ ಹೊಡೆದಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ಪತ್ರಕರ್ತರಿಗೆ ತಿಳಿಸಿದರು.