ಸನ್ಮಾರ್ಗ ವಾರ್ತೆ-
ಹೊಸದಿಲ್ಲಿ, ಜ. 7: ಜೆಎನ್‍ಯು ಕ್ಯಾಂಪಸ್ ಒಳಗೆ ಮುಖವಾಡ ಧರಿಸಿ ನುಗ್ಗಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಮೇಲೆ ಹಲ್ಲೆ ನಡೆಸಿದ ಘಟನೆಯ ಹೊಣೆಯನ್ನು ಹಿಂದೂ ರಕ್ಷಾ ದಳ ವಹಿಸಿಕೊಂಡಿದೆ. ಹಿಂದೂ ರಕ್ಷಾದಳ ಅಧ್ಯಕ್ಷ ಪಿಂಕಿ ಚೌಧರಿಯು ಜೆ ಎನ್ ಯು ದಾಳಿಯ ಸಂಪೂರ್ಣ ಹೊಣೆಹೊತ್ತು ಟ್ವೀಟ್ ಮಾಡಿದ್ದಾರೆ. ಜೆಎನ್‍ಯು ಕ್ಯಾಂಪಸ್ ಹಿಂದೂ ವಿರೋಧಿ, ರಾಷ್ಟ್ರ ವಿರೋಧಿ ಚಟುವಟಿಕೆಗಳ ಕೇಂದ್ರವಾಗಿ ಪರಿವರ್ತನೆಯಾಗಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ಜೆಎನ್‍ಯುವಿನಲ್ಲಿ ರವಿವಾರ ರಾತ್ರೆ ನಡೆದ ದಾಳಿಯ ಸಂಪೂರ್ಣ ಹೊಣೆಯನ್ನು ಹೊತ್ತುಕೊಳ್ಳುತ್ತೇವೆ. ಕ್ಯಾಂಪಸ್ಸಿಗೆ ನುಗ್ಗಿದ್ದು ನಮ್ಮ ಕಾರ್ಯಕರ್ತರು ಎಂದು ಪಿಂಕಿ ಚೌಧರಿ ಟ್ವೀಟ್ ಮಾಡಿದ್ದಾರೆ.
ಜೆಎನ್‍ಯು ಕಮ್ಯುನಿಸ್ಟರ ಒಂದು ಹಬ್ ಆಗಿದೆ. ಅಂತಹ ಕೇಂದ್ರಗಳನ್ನು ಸಹಿಸಲಾಗದು. ಅವರು ನಮ್ಮ ದೇಶ, ಧರ್ಮವನ್ನು ಅಪಮಾನಿಸುತ್ತಿದ್ದಾರೆ. ಭವಿಷದ್ಯದಲ್ಲಿ ಯಾರಾದರೂ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಲು ಯತ್ನಿಸಿದರೆ, ಇತರ ವಿಶ್ವವಿದ್ಯಾನಿಲಯಗಳಲ್ಲಿ ಕೂಡ ನಾವು ಇದೇ ರೀತಿ ಮಾಡುತ್ತೇವೆ ಎಂದು ಚೌಧರಿ ಮುನ್ನೆಚ್ಚರಿಕೆ ನೀಡಿದ್ದಾನೆ.
Hindu Raksha Dal takes responsibility of #JNU attack and says will keep doing such attacks in the future. #JNUViolence pic.twitter.com/lJgE3S2FHa
— Shivangi Thakur (@thakur_shivangi) January 6, 2020












