ಅಬುದಾಬಿ: ರೆಸ್ಟೋರೆಂಟ್ ಮೆನುಗಳಲ್ಲಿ ಕ್ಯಾಲರಿ ಪ್ರಮಾಣ ನಮೂದಿಸುವುದು ಕಡ್ಡಾಯ

0
5

ಸನ್ಮಾರ್ಗ ವಾರ್ತೆ

ಎಮಿರೇಟ್ ನಲ್ಲಿರುವ ರೆಸ್ಟೋರೆಂಟ್ಗಳು ತಮ್ಮ ಮೆನುಗಳಲ್ಲಿ ಪೌಷ್ಟಿಕಾಂಶ ಮತ್ತು ಕ್ಯಾಲರಿ ಮಾಹಿತಿಯನ್ನು ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಹೊರಗೆ ತಿನ್ನುವಾಗ ಮತ್ತು ಆಹಾರವನ್ನು ಆರ್ಡರ್ ಮಾಡುವಾಗ ಜನರು ಸ್ಪಷ್ಟ ಮಾಹಿತಿಯನ್ನು ಪಡೆಯಲು ಸಹಾಯ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ.. ಈ ನೀತಿಯು 2027 ಜೂನ್ ಒಂದರಂದು ಜಾರಿಗೆ ಬರಲಿದೆ.

ರೆಸ್ಟೋರೆಂಟ್ಗಳು ಕೆಫೆಗಳು ಆಹಾರ ಟ್ರಕ್ ಗಳು ಮತ್ತು ಮನರಂಜನಾ ಸ್ಥಳಗಳು ಸೇರಿದಂತೆ ಆಹಾರ ಮತ್ತು ಪಾನೀಯಗಳನ್ನು ಪೂರೈಸುವ ಎಲ್ಲಾ ಸಂಸ್ಥೆಗಳಿಗೆ ಈ ಕಾನೂನು ಅನ್ವಯಿಸುತ್ತದೆ. ಆನ್ಲೈನ್ ಮೆನುಗಳು ಅಂಗಡಿಯಲ್ಲಿನ ಪ್ರದರ್ಶನಗಳು ಸ್ವಯಂ ಆರ್ಡರ್ ಕಿಯೋಸ್ಕ್ ಗಳು ಡ್ರೈವ್ ತ್ರೂ ಮೆನುಗಳು ಮತ್ತು ಫ್ಲೈಯರ್ ಗಳಲ್ಲಿ ಕ್ಯಾಲೋರಿ ಮಾಹಿತಿಯನ್ನು ಸ್ಪಷ್ಟವಾಗಿ ಪ್ರದರ್ಶಿಸಬೇಕು.

ಪ್ರತಿಯೊಂದು ಆಹಾರ ಮತ್ತು ಪಾನೀಯದ ಕ್ಯಾಲೋರಿ ಅಂಶವನ್ನು ಮೆನುವಿನಲ್ಲಿ ಕಿಲೋ ಕ್ಯಾಲರಿಗಳಲ್ಲಿ ನಿಖರವಾಗಿ ನಮೂದಿಸಬೇಕು. ಇದು ವಯಸ್ಕರ ಮತ್ತು ಮಕ್ಕಳಿಗೆ ಸರಾಸರಿ ದೈನಂದಿನ ಕ್ಯಾಲೋರಿ ಅವಶ್ಯಕತೆಗಳ ಮಾಹಿತಿಯನ್ನು ಸಹ ಒಳಗೊಂಡಿರಬೇಕು ಎಂದು ಸರಕಾರ ಹೇಳಿದೆ.