ಸನ್ಮಾರ್ಗ ವಾರ್ತೆ
ಗಾಝಾ ಯುದ್ಧದ ಸಮಯದಲ್ಲಿ ನಿರಪರಾಧಿ ಫೆಲಸ್ತೀನ್ ನಾಗರಿಕರನ್ನು ಇಸ್ರೇಲ್ ಯೋಧರು ಮಾನವ ಗುರಾಣಿಗಳಾಗಿ ಬಳಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಇದನ್ನು ಇಸ್ರೇಲ್ ಸೈನಿಕರು ಮತ್ತು ಕಮಾಂಡರ್ಗಳು ಒಪ್ಪಿಕೊಂಡಿದ್ದಾರೆ. ಕಟ್ಟಡಗಳು ಮತ್ತು ಸುರಂಗಗಳನ್ನು ಪ್ರವೇಶಿಸುವ ಮೊದಲು ಫೆಲೆಸ್ತೀನಿಯರಿಂದ ಬಾಂಬುಗಳು ಮತ್ತು ಸ್ಪೋಟಕಗಳನ್ನು ಪರಿಶೀಲಿಸುವ ಕ್ರಮ ಇದಾಗಿತ್ತು ಮತ್ತು ಮೇಲಾಧಿಕಾರಿಗಳ ಮೌನ ಅನುಮೋದನೆ ಇತ್ತು ಎಂದು ಸೈನಿಕರು ಸಾಕ್ಷಿ ನುಡಿದಿದ್ದಾರೆ.
ಝ್ಮಾನ್ ಎಮೆಟ್ ಎಂಬ ಸಾಕ್ಷ್ಯ ಚಿತ್ರದ ಸರಣಿಯ ವಿಶೇಷ ಸಂಚಿಕೆಯಲ್ಲಿ ಸೈನಿಕರು ಮತ್ತು ಹಿರಿಯ ಅಧಿಕಾರಿಗಳ ಈ ಹೇಳಿಕೆಗಳು ಇವೆ . ಈ ರೀತಿ ಎಷ್ಟು ಜನರನ್ನು ಬಳಸಲಾಗಿದೆ ಎಂಬುದಕ್ಕೆ ನಿಖರವಾದ ಅಂಕಿ ಅಂಶಗಳು ಇಲ್ಲದಿದ್ದರೂ ಹೀಗೆ ವ್ಯಾಪಕವಾಗಿ ಬಳಸಲಾಗಿದೆ ಎಂಬ ವರದಿ ಇದೆ.
ಹಮಾಸ್ ಭೂಗತ ಸುರಂಗಗಳನ್ನು ನಾಶ ಮಾಡಲು ನಿಯೋಜಿತವಾದ ವಿಶೇಷ ಪಡೆಗಳು ಫೆಲಸ್ತೀನಿಯರನ್ನು ಮೊದಲು ಸುರಂಗದಳಗೆ ಬಿಟ್ಟು ಯಾವುದೇ ಸ್ಪೋಟಕಗಳು ಇಲ್ಲ ಎಂದು ಸ್ಪಷ್ಟಪಡಿಸಿಕೊಂಡ ಬಳಿಕ ಯೋಧರು ಹೋಗುತ್ತಿದ್ದರು. ಒಂದು ವೇಳೆ ಸ್ಪೋಟ ಇದ್ದರೆ ಅದು ಸಿಡಿದು ಹೀಗೆ ಒಳಹೋದ ಫೆಲಸ್ತೀನಿ ನಾಗರಿಕರು ಸಾಯುತ್ತಾರೆ. ಆ ಮೂಲಕ ಸೇನೆ ತನ್ನನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿತ್ತು.
ಸೈನಿಕರಿಗೆ ಆಗುವ ಗಾಯಗಳ ಅಪಾಯವನ್ನು ಕಡಿಮೆ ಮಾಡಲು ಇದು ತ್ವರಿತ ಮತ್ತು ಸುರಕ್ಷಿತ ಮಾರ್ಗವೆಂದು ಅನೇಕ ಕಮಾಂಡರ್ಗಳು ಹೇಳಿದ್ದಾರೆ.












