ಸನ್ಮಾರ್ಗ ವಾರ್ತೆ-
ಹೊಸದಿಲ್ಲಿ, ಜ. 7: ದಿಲ್ಲಿ ಏಮ್ಸ್ ನಲ್ಲಿ ಚಿಕಿತ್ಸೆ ಕೊಡಿಸಬೇಕೆಂದು ಆಗ್ರಹಿಸಿ ಭೀಂ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಝಾದ್ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ರಕ್ತ ಹೆಪ್ಪುಗಟ್ಟುವ ಪೊಲಿಸೈತೀಮಿಯ ಎಂಬ ರೋಗ ಆಝಾದ್‍ರಿಗಿದೆ. ದೀರ್ಘಕಾಲದಿಂದ ಅವರು ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ಲಭ್ಯಗೊಳಿಸಲು ಜೈಲು ಅದಿಕಾರಿಗಳಿಗೆ ದಿಲ್ಲಿ ಸರಕಾರಕ್ಕೆ ನಿರ್ದೇಶ ನೀಡಬೇಕೆಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ತುರ್ತು ಚಿಕಿತ್ಸೆ ಲಭ್ಯಗೊಳಿಸದಿದ್ದರೆ, ಹೃದಯಾಘಾತ ಆಗುವ ಸಾಧ್ಯತೆಯಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಹೋರಾಟದಲ್ಲಿ ಆಝಾದ್‍ರನ್ನು ಬಂಧಿಸಲಾಗಿತ್ತು. ನಂತರ ಡಿಸೆಂಬರ್ 21ಕ್ಕೆ ದಿಲ್ಲಿ ಕೋರ್ಟು ಆಝಾದ್‍ರಿಗೆ ನ್ಯಾಯಾಂಗ ಬಂಧನ ವಿಧಿಸಿ ಆಜ್ಞೆ ಹೊರಡಿಸಿತ್ತು.












