ಸನ್ಮಾರ್ಗ ವಾರ್ತೆ-
ಹೊಸದಿಲ್ಲಿ, ಜ. 8: ದೇಶಾದ್ಯಂತ ಟ್ರೇಡ್ ಯೂನಿಯನ್ಗಳು ಇಂದು ಭಾರತ ಬಂದ್ ಘೋಷಿಸಿವೆ. ಕೇವಲ ಮುಷ್ಕರ ಮಾತ್ರ ಎಂದು ಕೂಡ ಹೇಳಲಾಗುತ್ತಿದೆ. ಒಟ್ಟು ಪರಿಣಾಮವಾಗಿ ಬ್ಯಾಕಿಂಗ್, ಸಾರಿಗೆಗೆ ಅಡಚಣೆಯಾಗುವ ಸಾಧ್ಯತೆಯೂ ಇದೆ. ಕೇಂದ್ರ ನೌಕರರು ಹರತಾಳದಲ್ಲಿ ಭಾಗವಹಿಸಬಾರದೆಂದು ಆದೇಶ ಜಾರಿಗೊಳಿಸಲಾಗಿದೆ.
ಒಡಿಸ್ಸದಲ್ಲಿ ಭಾರತ ಬಂದ್ ಪ್ರಭಾವ ಕಾಣಿಸಿಕೊಂಡಿದ್ದು ಭುವನೇಶ್ವರರದಲ್ಲಿ ಕಾಂಗ್ರೆಸ್ ಬೆಂಬಲಿತ ಟ್ರೇಡ್ ಯೂನಿಯನ್ ಕಾರ್ಯಕರ್ತರು ರಸ್ತೆ ತಡೆ ನಿರ್ಮಿಸಿದರು. ರೈಲಿಗೆ ತಡೆಯೊಡ್ಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಭಾರತ ಬಂದ್ನ ದೊಡ್ಡ ಪ್ರಭಾವ ಕಂಡು ಬಂದಿದೆ. ಸಿಲಿಗುಡಿಯಲ್ಲಿ ರಾಜ್ಯ ಸರಕಾರದ ಬಸ್ ಚಾಲಕರು ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುತ್ತಿದ್ದಾರೆ. ಪ್ರತಿಭಟನಾಕಾರರ ಹಲ್ಲೆಯಿಂದ ಪಾರಾಗಲು ಹೀಗೆ ಮಾಡಿದ್ದಾರೆ.
ಪಶ್ಚಿಮ ಬಂಗಾಳದ ಗುವಾಹಟಿಯಲ್ಲಿ, ಈಸ್ಟ್ ಮಿದನಾಪುರದಲ್ಲಿ ಪ್ರತಿಭಟನಾಕಾರರು ಸಾರಿಗೆ ಸಂಚಾರವನ್ನು ತಡೆಯುತ್ತಿದ್ದಾರೆ. ಬಂದ್ ಬೆಂಬಲಿಗರು ಹೆದ್ದಾರಿ 41ರಲ್ಲಿ ರಸ್ತೆ ತಡೆ ನಿರ್ಮಿಸಿದರು. ಹಾವ್ಡಾದಲ್ಲಿ ರೈಲು ಸಂಚಾರಕ್ಕೂ ಅಡ್ಡಿಪಡಿಸಿದ್ದಾರೆ. ಬ್ಯಾಂಕ್ ಯೂನಿಯನ್ಗಳು ಹೇಳಿಕೆ ನೀಡಿದ್ದು ಈ ಹರತಾಳದಲ್ಲಿ ಟ್ರೇಡ್ ಯೂನಿಯನ್ಗಳು ಶಾಮೀಲಾಗಿವೆ ಎಂದು ತಿಳಿಸಿದೆ. ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ, ಆಲ್ ಇಂಡಿಯ ಬ್ಯಾಂಕ್ ಆಫಿಸಸರ್ಸ್ ಅಸೋಸಿಯೇಶನ್, ಬ್ಯಾಂಕ್ ಸಿಬ್ಬಂದಿ ಫೆಡರೇಶನ್ ಅಫ್ ಇಂಡಿಯ, ಭಾರತೀಯ ರಾಷ್ಟ್ರೀಯ ಬ್ಯಾಂಕ್ ಸಿಬ್ಬಂದಿ ಸಂಘ, ಭಾರತೀಯ ರಾಷ್ಟ್ರೀಯ ಬ್ಯಾಂಕ್ ಅಧಿಕಾರಿ ಕಾಂಗ್ರೆಸ್ ಮತ್ತು ಬ್ಯಾಂಕ್ ನೌಕರ ಸೇನಾ ಮಹಾಸಂಘ ನಂತಹ ಬ್ಯಾಂಕ್ ಯೂನಿಯನ್ಗಳು ರಾಷ್ಟ್ರವ್ಯಾಪಿ ಹರತಾಳ ಘೋಷಿಸಿವೆ.
ಟ್ರೇಡ್ ಯೂನಿಯನ್ ಇಂಟಕ್, ಎಟಕ್, ಎಚ್ಎಂಎಸ್, ಸಇಟು, ಎಐಯುಟಿಯುಸಿ, ಟಿಯುಸಿಸಿ, ಎಸ್ಇಡಬ್ಲ್ಯೂ ಎ, ಎಐಸಿಸಿಟಿಯು, ಎಲ್ಪಿಎಫ್, ಯುಟಿಯುಸಿ ಸಹಿತ ಬೇರೆ ಬೆರೆ ಸಂಘಟನೆಗಳು ಮತ್ತು ಫೆಡರೇಶನ್ಗಳು ಸೆಪ್ಟಂಬರ್ನಲ್ಲಿ ಜನವರಿ ಎಂಟರಂದು ಹರತಾಳವನ್ನು ಘೋಷಿಸಿದ್ದವು.












