ಜೆಎನ್‍ಯು: ಅಹ್ಮದಾಬಾದ್‍ನಲ್ಲಿ ಎಬಿವಿಪಿ, ಎನ್‍ಎಸ್‍ಯುಐ ಘರ್ಷಣೆ, 10 ಮಂದಿಗೆ ಗಾಯ

0
654

ಸನ್ಮಾರ್ಗ ವಾರ್ತೆ-

ಅಹ್ಮದಾಬಾದ್, ಜ. 8: ಗುಜರಾತಿನ ಅಹ್ಮದಾಬಾದ್‍ನಲ್ಲಿ ಕಾಂಗ್ರೆಸ್ ವಿದ್ಯಾರ್ಥಿ ಸಂಘಟನೆ ಎನ್‍ಎಸ್‍ಯುಐ ಮತ್ತು ಆರೆಸ್ಸೆಸ್ ವಿದ್ಯಾರ್ಥಿ ಸಂಘಟನೆ ಎಬಿವಿಪಿ ನಡುವೆ ಹಿಂಸಾಚಾರ ಘಟನೆ ನಡೆದಿದ್ದು ಪಿಟಿಐ ವರದಿಯ ಪ್ರಕಾರ ಹತ್ತು ಮಂದಿ ಗಾಯಗೊಂಡಿದ್ದಾರೆ. ಎನ್‍ಎಸ್‍ಯುಐಯ ಕಾರ್ಯಕರ್ತರು ರವಿವಾರ ದಿಲ್ಲಿಯ ಜವಾಹರಲಾಲ್ ನೆಹರೂ ಯುನಿವರ್ಸಿಟಿಯಲ್ಲಿ ನಡೆದ ಹಿಂಸೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದರು.

ಎನ್‍ಎಸ್‍ಯುಐಯ ಸದಸ್ಯರು ಅಹ್ಮದಾಬಾದ್ ನ ಪನಾಡಿಯಲ್ಲಿ ಎಬಿವಿಪಿ ಕಚೇರಿಯ ಹೊರಗೆ ಪ್ರತಿಭಟನೆ ನಡೆಸುತ್ತಿದ್ದರು. ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಎರಡು ಸಂಘಟನೆಗಳು ಹಲ್ಲೆ ನಡೆಸಿದ ಕುರಿತು ಪರಸ್ಪರ ಆರೋಪ ಹೊರಿಸುತ್ತಿವೆ. ಗುಜರಾತ್ ಎನ್‍ಎಸ್ ಯು ಐ ಪ್ರಧಾನ ಕಾರ್ಯದರ್ಶಿ ನಿಖಿಲ್ ಸವಾನಿಯವರ ತಲೆಗೆ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎನ್ ಯುಐ ಘಟನೆಯ ಕುರಿತು ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದೆ. ಇನ್ನೊಂದೆಡೆ ಎಬಿವಿಪಿ ಎನ್‍ಎಸ್‍ಯುಐ ಕಾರ್ಯಕರ್ತರು ತಮ್ಮ ಕಚೇರಿಯಲ್ಲಿ ದಾಂಧಲೆಯೆಬ್ಬಿಸಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆಂದು ಟ್ವೀಟ್ ಮಾಡಿದೆ.