ಇರಾನ್ ದಾಳಿ: ಕಚ್ಚಾ ತೈಲ ದರ ಹೆಚ್ಚಳ: ಭಾರತದಲ್ಲಿ ಇಂದು ದರ ಹೆಚ್ಚಳವಿಲ್ಲ

0
879

ಸನ್ಮಾರ್ಗ ವಾರ್ತೆ-

ಹೊಸದಿಲ್ಲಿ, ಜ. 8: ಅಮೆರಿಕದ ಸೈನಿಕ ನೆಲೆಗೆ ಇರಾನ್ ಮಿಸೈಲ್ ದಾಳಿ ಮಾಡಿದ ಬಳಿಕ ಕಚ್ಚಾ ತೈಲದರ ಏರಿಕೆಯಾಗಿದೆ. ಶೇ. 4.5ರಷ್ಟು ದರ ಹೆಚ್ಚಳ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದಾಖಲಾಗಿದ್ದು ಡಬ್ಲ್ಯು ಟಿಈ ಇಂಡಕ್ಸ್ ನಲ್ಲಿ ತೈಲದರ 4.53ರಿಂದ ಹೆಚ್ಚಿ 65.54ಕ್ಕೆ ತಲುಪಿತ್ತು. ಎ೦ಸಿಕ್ಸ್ ನಲ್ಲಿ ಕಚ್ಛಾ ತೈಲ ವಹಿವಾಟು ಆರಂಭದಲ್ಲಿ ಪ್ರತಿ ಬ್ಯಾರಲ್‍ಗೆ 25 ರೂಪಾಯಿ ಹೆಚ್ಚಳದಿಂದ ಆರಂಭವಾಗಿ ಹೊಸದ ರ 4,519 ರೂಪಾಯಿಗೆ ತಲುಪಿದೆ. ಹನ್ನೊಂದು ಗಂಟೆವರೆಗೆ ಮತ್ತಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್‍ಗೆ 84 ರೂಪಾಯಿ ಹೆಚ್ಚಳವಾಯಿತು. ಅಂದರೆ ಪ್ರತೀ ಬ್ಯಾರೆಲ್‍ಗೆ 4, 578 ರೂಪಾಯಿಗೆ ತಲುಪಿತು.

ಇರಾನ್- ಇರಾಕಿನಲ್ಲಿ ದಾಳಿ ಮಾಡಿದ್ದರಿಂದ ತೈಲದರದಲ್ಲಿ ಏರಿಕೆ ಕಂಡಿದೆ. ಡಬ್ಲ್ಯೂಟಿಐ ಕ್ರೂಡ್ ಆಯಿಲ್‍ನಲ್ಲಿ ಶೆ. 4.5ರಷ್ಟು ಹೆಚ್ಚಳವಾಗಿದೆ. ಅಂದರೆ ಪ್ರತೀ ಡಾಲರ್ ಗೆ 65.54 ಡಾಲರ್ ಪ್ರತಿ ಬ್ಯಾರಲ್ ದರವಾಗಿದೆ. ಇಂದು ಭಾರತದಲ್ಲಿ ಪೆಟ್ರೋಲ್ ಡೀಸೆಲ್ ದರದಲ್ಲಿ ಬದಲಾವಣೆಯಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.