ಸನ್ಮಾರ್ಗ ವಾರ್ತೆ
ಟೆಹ್ರಾನ್, ಜ. 8: ಸೇನಾ ಜನರಲ್ ಖಾಸಿಂ ಸುಲೈಮಾನಿಯವರನ್ನು ಅಮೆರಿಕ ಡ್ರೋಣ್ ದಾಳಿಯಿಂದ ಹತ್ಯೆ ಮಾಡಿದ್ದಕ್ಕೆ ನಾವು ಪ್ರತೀಕಾರ ಆರಂಭಿಸಿದ್ದೇವೆ ಎಂದು ಇರಾನ್ ಪರಮೋಚ್ಚ ನಾಯಕ ಆಯತುಲ್ಲಾ ಅಲಿ ಖಾಮ್‍ನಾ ಯ್ ಹೇಳಿದರು. ವಾಯುದಾಳಿ ಯಶಸ್ವಿಯಾಗಿದೆ ಎಂದು ಇರಾಕಿನ ದಾಳಿ ಅಮೆರಿಕದ ಮುಖಕ್ಕೆ ನೀಡಿದ ಗುದ್ದು ಎಂದು ಅವರು ವಿಶ್ಲೇಷಿಸಿದರು. ಸುಲೈಮಾನಿಯವರ ಹುತಾತ್ಮತೆಯ ಮುಂದೆ ತಲೆಬಗ್ಗಿಸುವೆ. ಅಮೆರಿಕವನ್ನು ಎದುರಿಸಲು ಇರಾನ್ ಸಜ್ಜಾಗಿದೆ ಎಂದು ಅವರು ಹೇಳಿದರು.
ಇರಾನ್ ಅಧ್ಯಕ್ಷ ಹಸನ್ ರೂಹಾನಿ ಅವರು ಅಮೆರಿಕದ ವಿರುದ್ಧ ಇನ್ನಷ್ಟು ಕಟು ಪ್ರತಿಕ್ರಿಯೆ ನೀಡಿದ್ದರು. ಖಾಸಿಂ ಸುಲೈಮಾನಿಯವರನ್ನು ಕೊಲೆಮಾಡುವ ಮೂಲಕ ಅಮೆರಿಕ ಕೈ ಕತ್ತರಿಸುವ ಕೆಲಸ ಮಾಡಿದೆ. ಆದರೆ ವಲಯದ ಅಮೆರಿಕದ ಕಾಲನ್ನು ಇರಾನ್ ಕತ್ತರಿಸಲಿದೆ ಎಂದು ರೂಹಾನಿ ಹೇಳಿದ್ದರು.












