ಸರಕಾರದ ರಾಯಭಾರಿಯಾಗಿದ್ದಾಗ ದೀಪಿಕಾ ರಾಷ್ಟ್ರ ಪ್ರೇಮಿ; ಈಗ ದೇಶದ್ರೋಹಿ -ಕನ್ಹಯ್ಯ ಕುಮಾರ್

0
2368

ಸನ್ಮಾರ್ಗ ವಾರ್ತೆ-

ಹೊಸದಿಲ್ಲಿ, ಜ.10: ನಟಿ ದೀಪಿಕಾ ಪಡುಕೋಣೆ ಮೋದಿ ಸರಕಾರದ ರಾಯಭಾರಿಯಾಗಿದ್ದಾಗ ದೇಶಪ್ರೇಮಿಯೂ ಜೆಎನ್‍ಯು ಸಂದರ್ಶಿಸಿದ್ದರಿಂದ ದೇಶದ್ರೋಹಿಯೂ ಹೇಗಾದರು ಎಂದು ಜೆಎನ್‍ಯು ಸ್ಟೂಡೆಂಟ್ಸ್ ಯೂನಿಯನ್ ನ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಪ್ರಶ್ನಿಸಿದರು.

ಮಾನವಸಂಪನ್ಮೂಲ ಸಚಿವಾಲಯದ ಮುಂದೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಅವರು ಮಾತಾಡುತ್ತಿದ್ದರು. ಪಡುಕೋಣೆ ಮತ್ತು ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧುರನ್ನು ಕಳೆದ ಅಕ್ಟೋಬರ್ ನಲ್ಲಿ ಮೋದಿ ಸರಕಾರ ಭಾರತ್‍ ಕಿ ಲಕ್ಷ್ಮಿ ಕಾರ್ಯಕ್ರಮದ ರಾಯಭಾರಿಯನ್ನಾಗಿಸಿದ್ದರು. ದೀಪಿಕಾ ಪಡುಕೋಣೆ ವಿದ್ಯಾರ್ಥಿಗಳ ಮೇಲೆ ಗೂಂಡಾ ದಾಳಿ ನಡೆದ ಜೆಎನ್‍ಯುಗೆ ಭೇಟಿ ನೀಡಿದ್ದರು. ನಂತರ ಸಂಘಪರಿವಾರ ಅವರ ವಿರುದ್ಧ ಅಪಹಾಸ್ಯವನ್ನು ಪ್ರಚೋದಿಸುತ್ತಿದೆ.