ಯೋಗಿ ವಿರುದ್ಧ ಘೋಷಣೆ ಕೂಗಿದ ಅಲಿಗಢ ವಿದ್ಯಾರ್ಥಿಗಳ ವಿರುದ್ಧ ಕೇಸು

0
1190

ಸನ್ಮಾರ್ಗ ವಾರ್ತೆ-

ಲಕ್ನೊ, ಜ.10: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕೆಟ್ಟದಾಗಿ ಘೋಷಣೆ ಕೂಗಿದ ಆರೋಪದಲ್ಲಿ ಅಲಿಗಢ ಮುಸ್ಲಿಂ ಯುನಿವರ್ಸಿಟಿಯ ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಅಲಿಗಢದಲ್ಲಿ ನಡೆದ ಮಾನವ ಸಂಕಲೆಯ ವೇಳೆ 25ರಿಂದ 30 ವಿದ್ಯಾರ್ಥಿಗಳು ಮುಖ್ಯಮಂತ್ರಿ ಯೋಗಿ, ಪ್ರಧಾನಿ ಮೋದಿಯ ವಿರುದ್ಧ ನಿಂದನಾತ್ಮಕ ಘೋಷಣೆ ಕೂಗಿದರೆಂದು ಅಲಿಗಡ ಸಿವಿಲ್ ಲೈನ್ ಸರ್ಕಲ್ ಅಧಿಕಾರಿ ಅನಿಲ್ ಸಮಾನಿಯ ಹೇಳಿದರು. 24ರಷ್ಟು ವಿದ್ಯಾರ್ಥಿಗಳ ವಿರುದ್ಧ ಕೇಸು ದಾಖಲಿಸಿಕೊಳ್ಳಲಾಗಿದೆ. ವೀಡಿಯೊ ನೋಡಿ ವಿದ್ಯಾರ್ಥಿಗಳ ವಿರುದ್ಧ ಕೇಸು ದಾಖಲಿಸಿಕೊಳ್ಳಲಾಗಿದೆ.